ಪುತ್ತೂರು ತಾಲೂಕು ಜಮೀಯತ್ತುಲ್ ಫಲಾಹ್ ಅಧ್ಯಕ್ಷರಾಗಿ ಶೇಖ್ ಜೈನುದ್ದೀನ್ ಆಯ್ಕೆ

Update: 2019-08-18 12:58 GMT

ಪುತ್ತೂರು: ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯತ್ತುಲ್ ಫಲಾಹ್ ಇದರ ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಶೇಖ್ ಜೈನುದ್ದೀನ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಉಮ್ಮರ್ ಕರಾವಳಿ ಆಯ್ಕೆಯಾಗಿದ್ದಾರೆ. 

ಆ.17ರಂದು ನಡೆದ ಘಟಕದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. 

ಉಪಾಧ್ಯಕ್ಷರಾಗಿ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಮತ್ತು ಅಶ್ರಫ್ ಕೊಟ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಶರೀಫ್ ಮುಕ್ರಂಪಾಡಿ, ಪತ್ರಿಕಾ ಕಾರ್ಯದರ್ಶಿಯಾಗಿ ಕರೀಂ ಸವಣೂರು, ಕೋಶಾಧಿಕಾರಿಯಾಗಿ ನ್ಯಾಯವಾದಿ ಫಝ್ಲುಲ್ ರಹೀಂ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಬಿ.ಎ. ಶಕೂರ್ ಹಾಜಿ, ಅಬ್ದುಲ್ ರಹಿಮಾನ್ ಆಝಾದ್, ಅಬ್ದುಲ್ ರಹಿಮಾನ್ ಯುನಿಕ್, ನ್ಯಾಯವಾದಿ ಕೆ.ಎಂ. ಸಿದ್ದೀಕ್, ಅಶ್ರಫ್ ಕಲ್ಲೇಗ, ಯೂಸುಫ್ ಒಳಮೊಗ್ರು, ಇಬ್ರಾಹಿಂ ಸಾಗರ್, ಎಂ.ಎ. ಹುಸೈನ್ ಕೆನರಾ, ಅಬ್ದುಲ್ ಅಝೀಝ್ ದರ್ಬೆ, ಪಿ.ಬಿ. ಹಸೈನಾರ್ ದರ್ಬೆ, ಅಬೂಬಕ್ಕರ್ ಮುಳಾರ್, ಹಾಜಿ ಅಶ್ರಫ್ ಗೋಳಿಕಟ್ಟೆ ಆಯ್ಕೆಯಾದರು.  

ದ.ಕ ಮತ್ತು ಉಡುಪಿ ಜಿಲ್ಲಾ ಜಮೀಯತ್ತುಲ್ ಫಲಾಹ್ ಘಟಕದ ಅಧ್ಯಕ್ಷ ಕೆ. ಕೆ. ಶಾಹುಲ್ ಹಮೀದ್ ಮತ್ತು ಬಂಟ್ವಾಳ ಜಮೀಯತ್ತುಲ್ ಫಲಾಹ್ ಘಟಕದ ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಜಮೀಯತ್ತುಲ್ ಫಲಾಹ್ ಜುಬೇಲ್ ಘಟಕದ ಪದಾಧಿಕಾರಿ ಮುಹಮ್ಮದ್ ಫಾರೂಕ್ ಉಪಸ್ಥಿತರಿದ್ದರು. 

ಜಮೀಯತ್ತುಲ್ ಫಲಾಹ್ ಘಟಕದ ಅಧ್ಯಕ್ಷ ಫಝ್ಲುಲ್ ರಹೀಂ ಅಧ್ಯಕ್ಷತೆ ವಹಿಸಿದ್ದರು. ಘಟಕದ ಕಾರ್ಯದರ್ಶಿ ಶೇಖ್ ಜೈನುದ್ದೀನ್ ವಾರ್ಷಿಕ ವರದಿ ಮಂಡಿಸಿದರು. ಖಜಾಂಜಿ ಪಿ.ಬಿ. ಹಸೈನಾರ್ ವರದಿ ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎಂ. ಅಬ್ದುಲ್ ಅಝೀಝ್ ಕೂರ್ನಡ್ಕ ದುವಾ ನೆರವೇರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News