ಅಸಾಧಾರಣ ಸಾಧನೆಗಳನ್ನು ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ: ಭೂತಾನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಭಾಷಣ

Update: 2019-08-18 14:04 GMT

ಥಿಂಪು (ಭೂತಾನ್), ಆ. 18: ಭಾರತ ಮತ್ತು ಭೂತಾನ್‌ಗಳ ನಡುವೆ ಬಾಹ್ಯಾಕಾಶ ಮತ್ತು ಡಿಜಿಟಲ್ ಹಣ ಪಾವತಿ ಮುಂತಾದ ಹೊಸ ಕ್ಷೇತ್ರಗಳಲ್ಲಿ ಉತ್ತಮ ಸಹಕಾರ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಪ್ರತಿಪಾದಿಸಿದ್ದಾರೆ ಹಾಗೂ ಭವಿಷ್ಯದ ತಲೆಮಾರುಗಳ ಮೇಲೆ ಪ್ರಭಾವ ಬೀರಬಲ್ಲ ಅಸಾಧಾರಣ ಸಾಧನೆಗಳನ್ನು ಮಾಡುವ ಸಾಮರ್ಥ್ಯವನ್ನು ಭೂತಾನ್‌ನ ವಿದ್ಯಾರ್ಥಿಗಳು ಹೊಂದಿದ್ದಾರೆ ಎಂದು ಹೇಳಿದ್ದಾರೆ.

‘‘ಇಂದಿನ ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಅವಕಾಶಗಳನ್ನು ಒದಗಿಸುತ್ತಿದೆ. ಮುಂದಿನ ತಲೆಮಾರುಗಳನ್ನು ಪ್ರಭಾವಿಸಬಲ್ಲ ಅಸಾಧಾರಣ ಸಾಧನೆಗಳನ್ನು ಮಾಡುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ. ನಿಮ್ಮ ಸಾಮರ್ಥ್ಯವೇನೆಂದು ಕಂಡು ಹಿಡಿಯಿರಿ ಹಾಗೂ ಅದನ್ನು ಪೂರ್ಣ ವಿಶ್ವಾಸದೊಂದಿಗೆ ಬೆಂಬತ್ತಿ’’ ಎಂದು ಭಾರತೀಯ ಪ್ರಧಾನಿ ಭೂತಾನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಭೂತಾನ್‌ಗೆ ನೀಡಿದ ಎರಡು ದಿನಗಳ ಭೇಟಿಯ ಕೊನೆಯ ದಿನದಂದು ರಾಯಲ್ ಯೂನಿವರ್ಸಿಟಿ ಆಫ್ ಭೂತಾನ್‌ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಭೂತಾನ್‌ನ ಉಪಗ್ರಹಗಳನ್ನು ವಿನ್ಯಾಸಗೊಳಿಸಲು ಹಾಗೂ ಉಡಾಯಿಸಲು ಭಾರತಕ್ಕೆ ಹೋಗುತ್ತಿರುವ ವಿಜ್ಞಾನಿಗಳನ್ನು ಅವರು ಸ್ವಾಗತಿಸಿದರು.

‘‘ಭೂತಾನ್‌ನ ಸಣ್ಣ ಉಪಗ್ರಹದ ವಿನ್ಯಾಸ ಮತ್ತು ಉಡಾವಣೆ ಸಂಬಂಧಿ ಕೆಲಸಗಳಿಗಾಗಿ ದೇಶದ ಯುವ ವಿಜ್ಞಾನಿಗಳು ಭಾರತಕ್ಕೆ ಪ್ರಯಾಣಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಶೀಘ್ರದಲ್ಲೇ ಒಂದು ದಿನ ನಿಮ್ಮ ಪೈಕಿ ಹೆಚ್ಚಿನವರು ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ಸಂಶೋಧಕರಾಗುತ್ತೀರಿ ಎಂಬ ಭರವಸೆಯಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News