ಢಾಕಾ ಕೊಳೆಗೇರಿಯಲ್ಲಿ ಭೀಕರ ಅಗ್ನಿ ದುರಂತ: 10,000 ಮಂದಿ ನಿರಾಶ್ರಿತರು

Update: 2019-08-18 14:12 GMT

ಢಾಕಾ, ಆ. 18: ಬಾಂಗ್ಲಾದೇಶ ರಾಜಧಾನಿ ಢಾಕಾದ ಕೊಳೆಗೇರಿಯೊಂದರಲ್ಲಿ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಕನಿಷ್ಠ 10,000 ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಎಂದುದ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಢಾಕಾದ ಮೀರ್‌ಪುರ್ ಉಪನಗರದ ಕೊಳೆಗೇರಿಯಲ್ಲಿ ಶುಕ್ರವಾರ ತಡ ರಾತ್ರಿ ಬೆಂಕಿ ಅಪಘಾತ ಸಂಭವಿಸಿತು ಹಾಗೂ ಸುಮಾರು 2,000 ಟಿನ್‌ನಿಂದ ನಿರ್ಮಿಸಲಾಗಿದ್ದ ಗುಡಿಸಲುಗಳು ಸುಟ್ಟು ಹೋದವು ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಹಲವು ಗಂಟೆಗಳ ಹೋರಾಟದ ಬಳಿಕ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾರೂ ಪ್ರಾಣ ಕಳೆದುಕೊಂಡಿಲ್ಲ. ಹಲವರಿಗೆ ಸಣಪುಟ್ಟ ಗಾಯಗಳಾಗಿವೆ.

ಈ ಗುಡಿಸಲುಗಳಲ್ಲಿ ಹೆಚ್ಚಾಗಿ ವಾಸಿಸುವ ಕಡಿಮೆ ವರಮಾನದ ಬಟ್ಟೆ ಕಾರ್ಖಾನೆ ಕೆಲಸಗಾರರು ಈದುಲ್ ಅಝ್‌ಹಾ ಹಬ್ಬ ಆಚರಣೆಗೆ ಕುಟುಂಬ ಸದಸ್ಯರ ಜೊತೆಗೆ ಹೊರಗೆ ಹೋಗಿದ್ದರು.

‘‘ಇಲ್ಲದಿದ್ದರೆ ಅಪಾರ ಪ್ರಮಾಣದ ಹಾನಿ ಸಂಭವಿಸುತ್ತಿತ್ತು’’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News