ಅರ್ಥವ್ಯವಸ್ಥೆಗೆ ಉತ್ತೇಜನದ ಅಗತ್ಯವಿದೆ: ರಜನೀಶ್ ಕುಮಾರ್

Update: 2019-08-18 16:12 GMT

ಕೋಲ್ಕತಾ, ಆ.19: ಸಾಲದ ಬೇಡಿಕೆಯನ್ನು ಸೂಕ್ತವಾಗಿ ನಿರ್ವಹಿಸಲಾಗುತ್ತಿದ್ದು, ಅರ್ಥವ್ಯವಸ್ಥೆಗೆ ಉತ್ತೇಜನದ ಅಗತ್ಯವಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.

ಅರ್ಥವ್ಯವಸ್ಥೆಯಲ್ಲಿ ಸಾಲದ ಮೇಲಿನ ಬೇಡಿಕೆ ಕಡಿಮೆಯಾಗಿದ್ದರೂ, ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹೆಚ್ಚುಕಡಿಮೆ ಬಂಡವಾಳ ಸಶಕ್ತವಾಗಿರುವ ಕಾರಣ ಸಾಲ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದವರು ಹೇಳಿದರು.

ಎಸ್‌ಬಿಐನ ಕೋಲ್ಕತಾ ವಿಭಾಗದ ಶಾಖಾ ವ್ಯವಸ್ಥಾಪಕರೊಂದಿಗೆ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಾರಿಯ ಮುಂಗಾರು ಅರ್ಥವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಸರಕಾರದ ಖರ್ಚು ಹೆಚ್ಚಲಿದ್ದು, ಮುಂಬರುವ ಹಬ್ಬ, ಉತ್ಸವಗಳ ಅವಧಿ ಸಾಲದ ಬೇಡಿಕೆಯನ್ನು ಹೆಚ್ಚಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News