ಹಾಂಕಾಂಗ್‌ನಲ್ಲಿ ಬೃಹತ್ ಪ್ರಜಾಪ್ರಭುತ್ವ ಪರ ಧರಣಿ

Update: 2019-08-18 16:53 GMT

ಹಾಂಕಾಂಗ್, ಆ. 18: ಸುರಿಯುತ್ತಿರುವ ಭಾರೀ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಜನರು ರವಿವಾರ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಮೆರವಣಿಗೆಯನ್ನು ನಡೆಸಿದ್ದಾರೆ. ಬೃಹತ್ ಉದ್ಯಾನವೊಂದರಿಂದ ಮೆರವಣಿಗೆ ಆರಂಭಿಸಿದ ಅವರು ನಗರದ ಪ್ರಮುಖ ರಸ್ತೆಯೊಂದರಲ್ಲಿ ತುಂಬಿಕೊಂಡರು.

ಹಾಂಕಾಂಗ್‌ನಲ್ಲಿ ಮೂರು ತಿಂಗಳುಗಳಿಂದ ಪ್ರತಿ ವಾರಾಂತ್ಯ ಬೃಹತ್ ಪ್ರಜಾಪ್ರಭುತ್ವ ಪರ ಧರಣಿಗಳು ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅದು ಹೆಚ್ಚೆಚ್ಚು ಹಿಂಸಾತ್ಮಕವಾಗುತ್ತಿದೆ. ಧರಣಿನಿರತರು ಮತ್ತು ಪೊಲೀಸರ ನಡುವಿನ ಸಂಘರ್ಷಗಳು ಹೆಚ್ಚುತ್ತಿವೆ.

ಆದರೆ, ರವಿವಾರದ ಮೆರವಣಿಗೆಯ ವೇಳೆ, ಮೆರವಣಿಗೆ ಸಾಗುವ ಪ್ರಧಾನ ರಸ್ತೆಯಲ್ಲಿ ಪೊಲೀಸರು ಕಂಡುಬಂದಿಲ್ಲ.

‘‘ಇಂದು ಯಾವುದೇ ಸಂಘರ್ಷ ಏರ್ಪಡುವುದಿಲ್ಲ ಎಂದು ನಾವು ಭಾವಿಸಿದ್ದೇವೆ’’ ಎಂದು ಸಂಘಟಕ ಬೋನೀ ಲಾಂಗ್ ಹೇಳಿದರು.

‘‘ಹಾಂಕಾಂಗ್ ಜನರು ಸಂಪೂರ್ಣ ಶಾಂತಿಯುತರಾಗಬಲ್ಲರು ಎನ್ನುವುದನ್ನು ನಾವು ಜಗತ್ತಿಗೆ ತೋರಿಸುತ್ತೇವೆ ಎನ್ನುವ ವಿಶ್ವಾಸ ನನಗಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News