ಇಂಡೋನೇಶ್ಯ: ದೋಣಿಯಲ್ಲಿ ಬೆಂಕಿ; 7 ಸಾವು

Update: 2019-08-18 17:04 GMT

ಕೆಂಡಾರಿ (ಇಂಡೋನೇಶ್ಯ), ಆ. 18: ಇಂಡೋನೇಶ್ಯದ ಸುಲವೆಸಿ ದ್ವೀಪದ ಸಮುದ್ರದಲ್ಲಿ ಶನಿವಾರ ಜನರನ್ನು ಸಾಗಿಸುತ್ತಿದ್ದ ದೋಣಿಯೊಂದರಲ್ಲಿ ಬೆಂಕಿ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆಗ್ನೇಯ ಸುಲವೆಸಿಯಿಂದ ಮಧ್ಯ ಸುಲವೆಸಿಯ ದ್ವೀಪವೊಂದಕ್ಕೆ ಸಾಗುತ್ತಿದ್ದ ದೋಣಿಯಲ್ಲಿ ಮಧ್ಯರಾತ್ರಿಯ ಸ್ವಲ್ಪವೇ ಹೊತ್ತಿನ ಬಳಿಕ ಬೆಂಕಿ ಕಾಣಿಸಿಕೊಂಡಿತು.

ದೋಣಿಯ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯರು 61 ಮಂದಿಯನ್ನು ರಕ್ಷಿಸಿದ್ದಾರೆ. ನಾಪತ್ತೆಯಾಗಿರುವರೆನ್ನಲಾದ ನಾಲ್ವರು ಪ್ರಯಾಣಿಕರಿಗಾಗಿ ಶೋಧ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News