ಮೂಡುಬಿದಿರೆಯಲ್ಲಿ ಎಬಿವಿಪಿ ನಗರ ಅಭ್ಯಾಸವರ್ಗ

Update: 2019-08-18 18:38 GMT

ಮೂಡುಬಿದಿರೆ: ಯುವ ಜನರು ತಮ್ಮ ಅಮೂಲ್ಯ ಸಮಯವನ್ನು ಮೋಜಿನಿಂದ ವ್ಯರ್ಥಮಾಡದೇ ರಾಷ್ಟ್ರೀಯ ಚಿಂತನೆಯಿಂದ ದೇಶದ ಪ್ರಗತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಜೈನಮಠದ ಭಟ್ಟಾರಕ ಸ್ವಾಮೀಜಿ ನುಡಿದರು. ಅವರು ಕಾಮಧೇನು ಸಭಾಂಗಣದಲ್ಲಿ ರವಿವಾರ ಮೂಡುಬಿದಿರೆ ಅಖಿಲಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ನಗರ ಅಭ್ಯಾಸವರ್ಗದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಆರೆಸ್ಸೆಸ್‍ನ ಜಿಲ್ಲಾ ಸಂಪರ್ಕ ಪ್ರಮುಖ್ ಅಜಿತ್ ಅವರು ಅತಿಥಿಯಾಗಿ ಪಾಲ್ಗೊಂಡು ಯುವ ಜನತೆ ದೇಶೀ ಚಿಂತನೆಯನ್ನು ಮೈಗೂಡಿಸಿಕೊಂಡು ನಾಯಕತ್ವವನ್ನು ಬೆಳೆಸಿಕೊಳ್ಳಬೇಕು ಎಂದರು. ಎಬಿವಿಪಿ ಜಿಲ್ಲಾ ಸಂಚಾಲಕ ಆಶೀಶ್ ಅಜ್ಜಿಬೆಟ್ಟು, ನಗರ ಕಾರ್ಯದರ್ಶಿ ನಿಶಿತ್ ಶೆಟ್ಟಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಮೂಡುಬಿದಿರೆ ನಗರ ಎಬಿವಿಪಿಯ ನೂತನ ನಗರ ಕಾರ್ಯದರ್ಶಿಯಾಗಿ ಧನಂಜಯ ಶೆಟ್ಟಿ, ಸಹಕಾರ್ಯದರ್ಶಿಯಾಗಿ ಆದರ್ಶ್, ಸೌಜನ್ಯ ಅವರ ಆಯ್ಕೆ ಸೇರಿದಂತೆ ಇತರ ಪ್ರಮುಖ ಜವಾಬ್ದಾರಿಗಳ ಹಂಚಿಕೆಯನ್ನು ಘೋಷಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News