ಮಹಾರಾಷ್ಟ್ರದಲ್ಲಿ ಟ್ರಕ್ - ಬಸ್ ಢಿಕ್ಕಿ; 13 ಸಾವು

Update: 2019-08-19 04:42 GMT

ಧುಲೆ(ಮಹಾರಾಷ್ಟ್ರ), ಆ.19: ಟ್ರಕ್ ಮತ್ತು ಬಸ್  ಮುಖಾಮುಖಿ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟು , 20ಮಂದಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ಧುಲೆ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.

ಔರಾಂಗಾಬಾದ್ ನಿಂದ ಶಹಾದಕ್ಕೆ ತೆರಳುತ್ತಿದ್ದ ರಾಜ್ಯಸಾರಿಗೆ ಸಂಸ್ಥೆಗೆ ಸೇರಿದ ಬಸ್  ನೇಮ್ಗುಲ್ ಎಂಬಲ್ಲಿ ಟ್ರಕ್ ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ.

ಅಪಘಾತದ ನಂತರ, ಟ್ರಕ್ ಪಲ್ಟಿಯಾಗಿದೆ .ಅಪಘಾತದಲ್ಲಿ  ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಸ್‌ನಲ್ಲಿ 45 ಮಂದಿ ಪ್ರಯಾಣಿಕರು  ಇದ್ದರು ಎನ್ನಲಾಗಿದೆ. 

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ  8 ಮಂದಿಯ ಸ್ಥಿತಿ ಗಂಭೀರವಾಗಿದೆ.  ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News