ಪ್ರಾಧ್ಯಾಪಕ ಪ್ರೊ.ಇಕ್ಬಾಲ್ ತೋನ್ಸೆಗೆ ಅವಳಿ ಅಂತಾರಾಷ್ಟ್ರೀಯ ಪ್ರಶಸ್ತಿ

Update: 2019-08-19 05:36 GMT

ಉಡುಪಿ, ಆ.19: ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಉಡುಪಿ ಮೂಲದ ಪ್ರಾಧ್ಯಾಪಕ ಪ್ರೊ.ಇಕ್ಬಾಲ್ ತೋನ್ಸೆ ಹವಾಲ್ದಾರ್ ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳಾದ 'ಮೋಸ್ಟ್ ಡೆಡಿಕೇಟೆಡ್ ಪ್ರೊಫೆಸರ್ ಅವಾರ್ಡ್' ಹಾಗೂ 'ಫ್ಯಾಬ್ಯುಲೆಸ್ ಗ್ಲೋಬಲ್ ಎಜುಕೇಶನ್ ಲೀಡರ್' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಶೈಕ್ಷಣಿಕ ಸಾಧನೆಗಾಗಿ ನೀಡಲಾಗುವ ಈ ಪ್ರಶಸ್ತಿಯನ್ನು ಇತ್ತೀಚೆಗೆ ಮುಂಬೈಯ ಬಾಂದ್ರಾದಲ್ಲಿ ನಡೆದ ‘ವರ್ಲ್ಡ್ ಎಜುಕೇಶನ್ ಕಾಂಗ್ರೆಸ್’ ಸಮಾರಂಭದಲ್ಲಿ ಅವರು ಸ್ವೀಕರಿಸಿದರು.

ಇನ್ನು ಹಣಕಾಸು ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ತಮಿಳುನಾಡು ಚೆನೈಯ ‘ವೀನಸ್ ಅಡ್ವಾನ್‌ಸ್ಡ್ ರಿಸರ್ಚ್ ಆ್ಯಂಡ್ ಡಿಸೈನ್’ ಸಂಸ್ಥೆ ನೀಡುವ ‘ಡಿಸ್ಟಿಂಗ್ವಿಸ್ಡ್ ಸೈಂಟಿಸ್ಟ್ ಇನ್ ಫೈನಾನ್ಸ್’ ಅಂತಾರಾಷ್ಟ್ರೀಯ ಪ್ರಶಸ್ತಿಯೂ ಪ್ರೊ.ಇಕ್ಬಾಲ್ ಅವರಿಗೆ ದೊರಕಿದೆ.

ಸದ್ಯ ಬಹರೈನ್ ರಾಷ್ಟ್ರದ ಕಿಂಗ್ಡಮ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ತಾಲೂಕಿನ ಹೂಡೆ ನಿವಾಸಿ. ಇವರ 45ಕ್ಕೂ ಅಧಿಕ ಸಂಶೋಧನಾ ಲೇಖನಗಳು ಅಂತಾರಾಷ್ಟ್ರೀಯ ಸಂಚಿಕೆಗಳಲ್ಲಿ ಪ್ರಕಟವಾಗಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News