ಪುದು: ನೆರೆ ಸಂತ್ರಸ್ತರಿಗೆ ಪರಿಹಾರಧನದ ಚೆಕ್ ವಿತರಣೆ

Update: 2019-08-19 06:29 GMT

ಫರಂಗಿಪೇಟೆ ಆ.19: ಇತ್ತೀಚೆಗೆ ಸಂಭವಿಸಿದ ನೆರೆಯಿಂದ ಸಂತ್ರಸ್ತರಾದ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುದು, ತುಂಬೆ ಹಾಗೂ ಸಜೀಪ ನಡು ಗ್ರಾ.ಪಂ. ವ್ಯಾಪ್ತಿಯ ಸುಮಾರು 56 ಫಲಾನುಭವಿಗಳಿಗೆ ಸರಕಾರದಿಂದ ವತಿಯಿಂದ ತಲಾ ಹತ್ತು ಸಾವಿರ ರೂ. ಮೊತ್ತದ ಪರಿಹಾರಧನದ ಚೆಕ್ ವಿತರಣೆ ಕಾರ್ಯಕ್ರಮ ಪುದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿಂದು ನಡೆಯಿತು.

 ಚೆಕ್ ಗಳನ್ನು ವಿತರಿಸಿ ಮಾತನಾಡಿದ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಮಡಿಕೇರಿಯಲ್ಲಿ ಕಳೆದ ಬಾರಿ ನೆರೆ ಸಂತ್ರಸ್ತರಿಗೆ ಪಾಕೃತಿಕ ವಿಕೋಪದಡಿ ಸರಕಾರ ನೀಡಿದ ಮಾದರಿಯಲ್ಲಿ ಕರಾವಳಿಯಲ್ಲೂ ನೆರೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಅದಕ್ಕೆ ಮುಖ್ಯಮಂತ್ರಿ ಸಕರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ ಎಂದರು.

ಪಾಕೃತಿಕ ವಿಕೋಪದಂತಹ ಘಟನೆಗಳ ಬಗ್ಗೆ ಎಚ್ಚೆತ್ತುಕೊಂಡು, ಮುಂದಿನ ದಿನಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅನಿವಾರ್ಯ ಇದೆ ಎಂದರು.

 ನೆರೆಯ ಸಂದರ್ಭದಲ್ಲಿ ಮತ್ತು ಬಳಿಕ ಪರಿಹಾರದ ಕಾರ್ಯದಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಯು.ಟಿ.ಖಾದರ್, ಪ್ರಾಕೃತಿಕ ವಿಕೋಪದ ಸಂದರ್ಭ ಸಹಕಾರ ನೀಡಿದ ಸಂಘಸಂಸ್ಥೆಗಳನ್ನು ಗುರುತಿಸಿ ಸರಕಾರದ ವತಿಯಿಂದ ಪ್ರಶಸ್ತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಗ್ರಾಮ ಪಂಚಾಯತ್ ಅದ್ಯಕ್ಷ ರಮ್ಲಾನ್, ಜಿಪಂ ಸದಸ್ಯ ರವೀಂದ್ರ ಕಂಬಳಿ, ತಾಲೂಕು ಪಂಚಾಯತ್ ಸದಸ್ಯ ಗಣೇಶ್ ತುಂಬೆ, ತುಂಬೆ ಗ್ರಾಪಂ. ಅಧ್ಯಕ್ಷೆ ಹೇಮಲತಾ ಜಿ., ಗ್ರಾಪಂ. ಸದಸ್ಯರಾದ ರಿಯಾಝ್ ಕುಂಪನಮಜಲು, ಮುಹಮ್ಮದ್ ನಝೀರ್ ಕುಂಜತ್ಕಳ, ಮುಹಮ್ಮದ್ ಮೋನು, ಅಬ್ದುಲ್ ಹಮೀದ್, ಭಾಸ್ಕರ ರೈ, ಅಖ್ತರ್ ಹುಸೈನ್, ಇಕ್ಬಾಲ್, ವೃಂದಾ ಪೂಜಾರಿ, ಯೋಗೀಶ್ ಪ್ರಭು, ಎಫ್.ಎಸ್.ಮುಹಮ್ಮದ್ , ಫರಂಗಿಪೇಟೆ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ, ತಹಶೀಲ್ದಾರ್ ರಶ್ಮಿ. ಎಸ್.ಆರ್., ಜಿ.ಪಂ. ಮಾಜಿ ಸದಸ್ಯ ಉಮರ್ ಫಾರೂಕ್ ತಾ.ಪಂ. ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಪ್ರಮುಖರಾದ ಎಸ್.ಅಬೂಬಕರ್ ಸಜೀಪ, ದಿನೇಶ್ ಶೆಟ್ಟಿ ಕೊಟ್ಟಿಂಜ, ಕೃಷ್ಣಕುಮಾರ್ ಪೂಂಜಾ, ಮಜೀದ್ ಪೆರಿಮಾರ್, ಇಬ್ರಾಹೀಂ ವಳವೂರು, ಆತೀಕ್ ಫರಂಗಿಪೇಟೆ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಡಿ.ಒ. ಪ್ರೇಮಲತಾ, ಕಾರ್ಯದರ್ಶಿ ಅಶ್ಬಿನಿ, ಸಿಬ್ಬಂದಿಯಾದ ಅಬ್ದುಸ್ಸಲಾಂ, ವಿನಯಾ ಮತ್ತು ಯಶೋಧಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News