ಮೀಸಲಾತಿ ಕುರಿತು ಚರ್ಚೆ: ಮೋಹನ್ ಭಾಗವತ್ ಹೇಳಿಕೆಗೆ ಕೇಂದ್ರ ಸಚಿವ ಅಠಾವಳೆ ಪ್ರತಿಕ್ರಿಯೆ

Update: 2019-08-19 16:42 GMT

ಹೊಸದಿಲ್ಲಿ, ಆ.19: ವಿವಾದಾತ್ಮಕ ಮೀಸಲಾತಿ ವಿಷಯದಲ್ಲಿ ಚರ್ಚೆ ನಡೆಯಬೇಕು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕರೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ಅವರು, ಅಂತಹ ಚರ್ಚೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ ಮೀಸಲಾತಿಯ ಕುರಿತು ಚರ್ಚೆಯ ಅಗತ್ಯವಿದೆ ಎಂದು ನನಗನಿಸುತ್ತಿಲ್ಲ. ಒಂದು ವೇಳೆ ಚರ್ಚೆ ನಡೆದರೂ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿಯ ಅಗತ್ಯವಿದೆ ಎಂದು ಜನರು ಹೇಳುತ್ತಾರೆ. ಏನೇ ಆದರೂ ಈ ವರ್ಗಗಳ ಮೀಸಲಾತಿಗೆ ಯಾವುದೇ ಚ್ಯುತಿ ಉಂಟಾಗಬಾರದು. ಈಗ ಇತರ ಸಮುದಾಯಗಳೂ ಮೀಸಲಾತಿ ಸೌಲಭ್ಯವನ್ನು ಪಡೆದಿವೆ’ ಎಂದರು.

ರವಿವಾರ ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ‘ಜ್ಞಾನ ಉತ್ಸವ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ಭಾಗವತ್,ಮೀಸಲಾತಿಯ ಪರವಾಗಿರುವವರು ಮತ್ತು ವಿರೋಧಿಸುವವರ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆಗಳು ನಡೆಯುವ ಅಗತ್ಯವಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News