ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ ಆರೋಪ: ಚಾಲಕನಿಗೆ ದಂಡ

Update: 2019-08-20 06:43 GMT

ಮಂಗಳೂರು, ಆ.20: ಬಸ್ ಚಾಲನೆ ವೇಳೆ ಮೊಬೈಲ್ ಫೋನ್ ಬಳಸಿದ ಆರೋಪದಲ್ಲಿ ಖಾಸಗಿ ಬಸ್ ಚಾಲಕನಿಗೆ ಮಂಗಳೂರು ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.

ಬಸ್ ಚಾಲಕ ಸಂದೇಶ್ ನಾಯ್ಕ್ ಎಂಬಾತನಿಂದ 1,100 ರೂ.‌ ದಂಡ ವಸೂಲಿ ಮಾಡಲಾಗಿದೆ.

ಆ.17ರಂದು ಸಂಜೆ 6:45ರ ಸುಮಾರು ಕಾರ್ಕಳದಿಂದ ಮಂಗಳೂರಿಗೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಚಾಲಕ ಸಂದೇಶ್ ನಾಯ್ಕ್ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದರು. ಈ ಬಗ್ಗೆ ಪ್ರಯಾಣಿಕರು ಆಕ್ಷೇಸಿದಾಗ ಬೇಜವಾಬ್ದಾರಿತನ ಉತ್ತರ ನೀಡಿದ್ದರೆನ್ನಲಾಗಿದೆ. ಮೂಡುಬಿದಿರೆಯ ಅಪಾಯಕಾರಿ ತಿರುವಿನಲ್ಲೂ ಚಾಲಕ ಮೊಬೈಲ್ ನಲ್ಲಿ ಮಾತನಾಡುವುದನ್ನು ಮುಂದುವರಿಸಿದ್ದ ಎನ್ನುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಇದು ಮಂಗಳೂರು ಪೊಲೀಸರ ಗಮನಕ್ಕೆ ಬಂದ ತಕ್ಷಣವೇ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

"ಚಾಲನೆ ವೇಳೆ ಮೊಬೈಲ್ ಬಳಕೆ ಹಾಗೂ ಪ್ರಯಾಣಿಕರೊಂದಿಗೆ ಬೇಜವಾಬ್ದಾರಿ ನಡವಳಿಕೆ" ಆರೋಪದಲ್ಲಿ ಸಂಬಂಧಿತ ಬಸ್ಸಿನ ಚಾಲಕನಿಗೆ 1,100 ರೂ. ದಂಡವನ್ನು ಮಂಗಳೂರು ಸಂಚಾರ ವಿಭಾಗದ ಎಸಿಪಿಯವರು ವಿಧಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News