ಮಾಣಿ: ಎಸ್ಕೆಎಸ್ಸೆಸ್ಸೆಫ್ ನಿಂದ ‘ಫ್ರೀಡಂ ಸ್ಕ್ವಾರ್ 2019’ ಕಾರ್ಯಕ್ರಮ

Update: 2019-08-20 08:53 GMT

ಮಾಣಿ, ಆ.20: ಎಸ್ಕೆಎಸ್ಸೆಸ್ಸೆಫ್ ವಿಟ್ಲ ವಲಯ ಹಾಗೂ ಎಸ್ಕೆಎಸ್ಸೆಸ್ಸೆಫ್ ಮಾಣಿ ಕ್ಲಸ್ಟರ್ ವತಿಯಿಂದ ದೇಶದ 73ನೇ ಸ್ವಾತಂತ್ರೋತ್ಸವದ ಅಂಗವಾಗಿ ಏರ್ಪಡಿಸಿದ ಫ್ರೀಡಂ ಸ್ಕ್ವಾರ್ 2019 ಕಾರ್ಯಕ್ರಮ ಇಲ್ಲಿನ ಕರ್ನಾಟಕ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು

ಎಸ್ಕೆಎಸ್ಸೆಸ್ಸೆಫ್ ವಿಟ್ಲ ವಲಯ ಅಧ್ಯಕ್ಷ ಕಬಕ ಅಶ್ರಫ್ ಸತ್ಯ ಬೋಧನೆಯನ್ನು ಪಠಿಸಿದರು

ಸೈಯದ್ ಶಂಸುದ್ದೀನ್ ಬಾತಿಶ್ ತಂಙಳ್ ಕುಕ್ಕಾಜೆ ದುಆಗೈದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸೂರಿಕುಮೇರು ಚರ್ಚ್ ಧರ್ಮಗುರು ವಂ. ಗ್ರೆಗರಿ ಪಿರೇರ ಶಾಂತಿ ಸೌಹಾರ್ದದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.

ಇನ್ನೊರ್ವ ಮುಖ್ಯ ಅತಿಥಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.

ಇದೇ ಸಂದರ್ಭ ನಿವೃತ್ತ ಯೋಧ ಜಗನ್ನಾಥ ಶೆಟ್ಟಿಯವರನ್ನು ಸಾಲು ಹೊದಿಸಿ ಸನ್ಮಾನಿಸಲಾಯಿತು.

ಇಬ್ರಾಹಿಂ ಮಾಣಿ, ಬಪ್ಪಳಿಗೆ ಮಸ್ಜಿದುನ್ನೂರ್ ಮಸೀದಿಯ ಖತೀಬ್ ಅಹ್ಮದ್ ನಹೀಂ ಫೈಝಿ ಮಾತನಾಡಿದರು.
ಸಚಿನ್ ರೈ ಮಾಣಿಗುತ್ತು, ನಾರಾಯಣ ಶೆಟ್ಟಿ ತೋಟ ಮಾಣಿ, ಎಸ್ಕೆಎಸ್ಸೆಸ್ಸೆಫ್ ವಿಟ್ಲ ವಲಯ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್, ಶರೀಫ್ ಮುಸಾ ಕುದ್ದುಪದವು, ಹಕೀಂ ಪರ್ತಿಪ್ಪಾಡಿ, ಮುಸಾ ಕರೀಂ ಮಾಣಿ, ಪಿ.ಇಬ್ರಾಹೀಂ ನಾಟೆಕಲ್, ಎಂ.ಹಮೀದ್‌ಪುಣಚ, ಶಾಫಿ ದಾರಿಮಿ, ಸಿದ್ದೀಕ್ ಅರ್ಶದಿ, ಅಶ್ರಫ್ ಮಾಣಿಮಜಲು, ಇಬ್ರಾಹೀಂ ಕಡವ, ಇಬ್ರಾಹೀಂ ಝೈನಿ, ಅಡ್ವೋಕೇಟ್ ಬದ್ರುದ್ದೀನ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

ಇಸ್ಹಾಕ್ ಕೌಸರಿ ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ಮಾಣಿ ಕಸ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News