ಕೊಂಕಣಿಯಲ್ಲಿ ಜಿಪಿಎಸ್‌ಸಿ ಪರೀಕ್ಷೆ ನಡೆಸಲು ಗೋವಾ ಸರಕಾರದ ಚಿಂತನೆ

Update: 2019-08-20 14:27 GMT

ಪಣಜಿ,ಆ.20: ಎಲ್ಲ ಹಿನ್ನೆಲೆಗಳ ಅಭ್ಯರ್ಥಿಗಳಿಗೆ ಸಮಾನ ಸ್ಪರ್ಧೆಯ ಅವಕಾಶವನ್ನೊದಗಿಸಲು ಗೋವಾ ಲೋಕಸೇವಾ ಆಯೋಗ (ಜಿಪಿಎಸ್‌ಸಿ)ದ ಪರೀಕ್ಷೆಗಳನ್ನು ಇಂಗ್ಲಿಷ್‌ನೊಂದಿಗೆ ಕೊಂಕಣಿ ಭಾಷೆಯಲ್ಲಿಯೂ ನಡೆಸಲು ಗೋವಾ ಸರಕಾರವು ಪರಿಶೀಲಿಸುತ್ತಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ನಾಡಗೀತೆ ಮತ್ತು ಸ್ಮರಣಿಕೆಯನ್ನು ಹೊಂದಲೂ ಸರಕಾರವು ಬಯಸಿದೆ ಎಂದರು.

ಗೋವಾ ವಿವಿಯಲ್ಲಿ ಸಂಶೋಧನಾ ಪತ್ರಿಕೆ ‘ಸಾಸೆ ’ಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು,ಜಿಪಿಎಸ್‌ಸಿ ಪರೀಕ್ಷೆಗಳನ್ನು ಕೊಂಕಣಿಯಲ್ಲಿ ನಡೆಸುವುದು ಇಂಗ್ಲಿಷ್‌ನಲ್ಲಿ ಹೆಚ್ಚಿನ ಪರಿಣಿತಿಯಿಲ್ಲದ ಯುವಜನರಿಗೆ ಸಮಾನ ಸ್ಪರ್ಧೆಯ ಅವಕಾಶವನ್ನು ಒದಗಿಸುತ್ತದೆ ಎಂದರು.

ಮಾಜಿ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು ಗೋವಾಕ್ಕೆ ನೀಡಿರುವ ಕೊಡುಗೆಗಾಗಿ 10 ಕೋ.ರೂ.ವೆಚ್ಚದಲ್ಲಿ ಗೋವಾ ವಿವಿಯಲ್ಲಿ ಸ್ಥಾಪಿಸಲಾಗುವ ಸ್ಕೂಲ್ ಆಫ್ ಲಾ ಆ್ಯಂಡ್ ಗವರ್ನನ್ಸ್‌ಗೆ ಅವರ ಹೆಸರನ್ನಿರಿಸಲಾಗುವುದು ಎಂದೂ ಸಾವಂತ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News