ರಾಜ್ಯದ ಅಭಿವೃದ್ಧಿಗೆ ಡಿ.ದೇವರಾಜ ಅರಸು ಕೊಡುಗೆ ಅಪಾರ: ಎಡಿಸಿ

Update: 2019-08-20 15:39 GMT

ಉಡುಪಿ, ಆ.20: ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆಗಳನ್ನು ನೀಡಿದ ಡಿ.ದೇವರಾಜ ಅರಸು ಅವರು, ಹಿಂದುಳಿದ ವರ್ಗದ ಜನರು ಜಮೀನಿನ ವಾರಸುದಾರರಾಗಲು ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹೇಳಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕರ್ನಾಟಕದ ಏಳಿಗೆಗೆ ಅವರು ರೂಪಿಸಿದ ಕಾರ್ಯ ಯೋಜನೆಗಳು ಅಗಾಧವಾಗಿದ್ದು, ಅವರ ಭೂಸುಧಾರಣಾ ಯೋಜನೆಯ ಬಹುಪಾಲು ಫಲಾನುಭವಿಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇರುವುದು ಗಮನಾರ್ಹ ಅಂಶವಾಗಿದೆ. ಇವರ ಆಡಳಿತ ಅವಧಿಯಲ್ಲಿ ವಿಶಾಲ ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣಗೊಂಡಿದ್ದು, ಕನ್ನಡವನ್ನು ಆಡಳಿತ ಭಾಷೆ ಯನ್ನಾಗಿ ರೂಪಿಸುವಲ್ಲಿ ಅವರು ಶ್ರಮಿಸಿದ್ದರು ಎಂದು.

ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗ ಹಾಗೂ ದಲಿತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಸತಿ ನಿಲಯಗಳನ್ನು ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಅವರ ಜೀವನ, ಸಾಧನೆಗಳ ಕುರಿತು ಓದುವುದರಿಂದ, ಅವರ ತತ್ವಆದರ್ಶಗಳು ಬದುಕನ್ನು ಉತ್ಕೃಷ್ಟಗೊಳಿಸಲು ದಾರಿದೀಪವಾಗುತ್ತದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗ ಹಾಗೂ ದಲಿತ ವಿದ್ಯಾರ್ಥಿಗಳ ವಿದ್ಯ್ಯಾಾಸಕ್ಕೆಅನುಕೂಲವಾಗುವಂತೆವಸತಿನಿಲಯಗಳನ್ನುನಿರ್ಮಿಸಿದ್ದಾರೆ.ವಿದ್ಯಾರ್ಥಿಗಳುಡಿ.ದೇವರಾಜಅರಸುಅವರಜೀವನ,ಸಾನೆಗಳ ಕುರಿತು ಓದುವುದರಿಂದ, ಅವರ ತತ್ವಆದರ್ಶಗಳು ಬದುಕನ್ನು ಉತ್ಕೃಷ್ಟಗೊಳಿಸಲು ದಾರಿದೀಪವಾಗುತ್ತದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಹಾಕಪ್ಪಆರ್.ಲಮಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಶೋಕ್ ಹೆಚ್., ಡಿಡಿಪಿಒ ಶೇಷಶಯನ ಕಾರಿಂಜ ಉಪಸ್ಥಿತರಿದ್ದರು.

ಪತ್ರಾಂಕಿತ ವ್ಯವಸ್ಥಾಪಕ ದಯಾನಂದ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News