ನಾಡದೋಣಿ ಸೀಮೆಎಣ್ಣೆ ವಿಶೇಷ ರಹದಾರಿ ಹೊಸತು, ನವೀಕರಣಕ್ಕೆ ಸೂಚನೆ

Update: 2019-08-20 15:40 GMT

ಉಡುಪಿ, ಆ.20: ಉಡುಪಿ ತಾಲೂಕಿನಲ್ಲಿ ಮೀನುಗಾರಿಕೆ ಮಾಡುವ ನಾಡದೋಣಿಗಳಿಗೆ ಅಳವಡಿಸಿರುವ ಔಟ್‌ಬೋರ್ಡ್ ಇಂಜಿನ್‌ಗಳ ಉಪಯೋಗಕ್ಕೆ ನೀಡುತ್ತಿರುವ ಸೀಮೆಎಣ್ಣೆ ವಿಶೇಷ ರಹದಾರಿಗಳನ್ನು 2019-20ನೇ ಸಾಲಿಗೆ ಹೊಸತು ಮತ್ತು ನವೀಕರಣಕ್ಕಾಗಿ ಅರ್ಜಿಗಳನ್ನು ಆ.30 ರವರೆಗೆ ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುವುದು.

ಅರ್ಜಿ ನಮೂನೆಗಳನ್ನು ತಾಲೂಕು ಕಚೇರಿ ಅಥವಾ ಸೀಮೆಎಣ್ಣೆ ವಿತರಣಾ ಕೇಂದ್ರಗಳಿಂದ ಪಡೆದುಕೊಳ್ಳಬಹುದಾಗಿದೆ. ಹೊಸ ರಹದಾರಿ ಮಂಜೂರಾತಿಗೆ ನಿಗದಿತ ನಮೂನೆಯಲ್ಲಿ ಅರ್ಜಿ, ಮೀನುಗಾರಿಕಾ ಇಂಜಿನ್ ದೋಣಿ ಮುಂತಾದವುಗಳನ್ನು ಖರೀದಿಸಿದ ಬಗ್ಗೆ ಬಿಲ್‌ಗಳ ಪ್ರತಿ, ಅರ್ಜಿದಾರರ 2 ಭಾವಚಿತ್ರ, ಅರ್ಜಿದಾರರ ವಾಸ್ತವ್ಯ ದಾಖಲೆ, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಹೊಂದಿರುವ ಉಳಿತಾಯ ಖಾತೆಯ ಬ್ಯಾಂಕ್ ಪಾಸ್‌ಪುಸ್ತಕದ ಪ್ರತಿ, ಮೀನುಗಾರಿಕಾ ಇಲಾಖೆ ನೋಂದಣಿ ಪ್ರತಿ, ದೋಣಿ ಮಾಲಕರ ಆಧಾರ್ ನಂಬರ್ ಕಡ್ಡಾಯವಾಗಿ ನೀಡಬೇಕು. ದೋಣಿ ಮಾಲಕನ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ವಿವರ, ದೋಣಿ ಮಾಲಕನ ಗುರುತಿಸಲ್ಪಡುವ ಅಧಿಕೃತ ವ್ಯಕ್ತಿಯ ಆಧಾರ್ ಸಂಖ್ಯೆ, ಅವಶ್ಯವಿರುವ ಇತರ ದಾಖಲೆಗಳನ್ನೂ ನೀಡಬೇಕಿದೆ.

ರಹದಾರಿ ನವೀಕರಣಕ್ಕೆ ಮೀನುಗಾರಿಕಾ ಸೀಮೆ ಎಣ್ಣೆ ವಿಶೇಷ ರಹದಾರಿ ಪತ್ರದ ಮೂಲ ಪ್ರತಿ, ಮೀನುಗಾರಿಕಾ ಇಲಾಖೆ ನವೀಕರಿಸಿದ ನೋಂದಣಿ ಪತ್ರದ ಪ್ರತಿಯನ್ನು ನೀಡುವಂತೆ ಉಡುಪಿ ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News