ಭಾರತದ ಆಧುನಿಕ ತಂತ್ರಜ್ಞಾನದ ಹರಿಕಾರ ರಾಜೀವ್ ಗಾಂಧಿ: ಸೊರಕೆ

Update: 2019-08-20 16:08 GMT

ಪಡುಬಿದ್ರಿ : ಭಾರತಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶತೆಯನ್ನು ನೀಡುವ ಮೂಲಕ ಭಾರತದ ಆಧುನಿಕತೆಯ ಹರಿಕಾರರಾಗಿ ಮಾಜಿ ಪ್ರದಾನಿ ದಿ. ರಾಜೀವ ಗಾಂದಿ ಪ್ರಖ್ಯಾತಿ ಪಡೆದರು ಎಂದು ಮಾಜಿ ಸಚಿವ ಸನ್ಮಾನ್ಯ ವಿನಯ್ ಕುಮಾರ್ ಸೊರಕೆಯವರು ಹೇಳಿದರು. 

ಅವರು ಮಂಗಳವಾರ ದೇಶಾದ್ಯಂತ "ಸದ್ಭಾವನಾ ದಿವಸ್" ಎಂದು ಆಚರಿಸುತ್ತಿರುವ ದಿ. ರಾಜೀವ್ ಗಾಂಧಿ ಯವರ 75ನೇ ಜನ್ಮದಿನಾಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ರವರ ಜನ್ಮದಿನಾಚಾರಣೆ ಕಾರ್ಯಕ್ರಮದ ಅಂಗವಾಗಿ "ಕಾಪು ರಾಜೀವ್ ಭವನ"ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ, ದೂರವಾಣಿ ಕ್ರಾಂತಿ, ಲೈಸೆನ್ಸ್ ರಾಜ್ ವ್ಯವಸ್ಥೆಯನ್ನು ಸಡಿಲೀಕರಣಗೊಳಿಸಿ ದೇಶೀಯ ಕೈಗಾರಿಕೆಗೆ ಉತ್ತೇಜನ, ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ,ಹದಿನೆಂಟು ವರ್ಷದ ಯುವಕ/ಯುವತಿಯರಿಗೆ ಮತದಾನದ ಹಕ್ಕು, ಯುವಜನ ಸಬಲಿಕರಣ ಕ್ಕಾಗಿ ರಾಷ್ಟ್ರೀಯ ಆಯೋಗ ರಚನೆ ಹೀಗೆ ಹಲವಾರು ಕ್ರಾಂತಿಕಾರಿ ನೀತಿ-ನಿರ್ಧಾರಗಳಿಂದ ಇಂದಿಗೂ ಜನಮಾನಸದಲ್ಲಿ ನೆಲೆಸಿರುವ ರಾಜೀವ್ ಗಾಂಧಿಯವರು ಅಗ್ರಪಂಕ್ತಿಯಲ್ಲಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿ ಡಿ. ದೇವರಾಜ ಅರಸುರವರು ಐತಿಹಾಸಿಕ ತೀರ್ಮಾನಗಳಾದ ಉಳುವವನೇ ಹೊಲದೊಡೆಯ ಕಾನೂನಿನ ಸಮರ್ಪಕ ಅನುಷ್ಠಾನ, ಹಿಂದುಳಿದ ವರ್ಗಗಳ ಶ್ರೇಯೋದ್ಧಾರಕನಾಗಿ ರಾಷ್ಟ್ರಕ್ಕೇ ಮಾದರಿಯಾಗುವ ಆಡಳಿತವನ್ನು ನೀಡುವ ಮೂಲಕ ಮೇಲ್ಪಂಕ್ತಿಯಲ್ಲಿ ನಿಲ್ಲುವ ನಾಯಕರಾಗಿದ್ದಾರೆ ಎಂದರು. ಎರಡೂ ಧೀಮಂತ ನಾಯಕರುಗಳಿಗೆ ನುಡಿ ನಮನ,ಪುಷ್ಪ ನಮನ ಸಲ್ಲಿಸಲಾಯಿತು.

ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ "ಶ್ರಾವಣ ಸಂಭ್ರಮ"ದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಸೊರಕೆಯವರು ಶ್ರಾವಣ ಮಾಸದ ವಿಶೇಷತೆ, ಆಚರಣೆಗಳ ಬಗ್ಗೆ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟದ ಅಧ್ಯಕ್ಷೆ ಶ್ರೀಮತಿ. ಪ್ರಭಾ ಶೆಟ್ಟಿ, ಜಿಲ್ಲಾ ಮಹಿಕಾ ಘಟಕದ ಅಧ್ಯಕ್ಷೆ ಗೀತ ವಾಗ್ಲೆ, ಕಾಪು ನಗರ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪ್ರಭಾವತಿ ಸಾಲ್ಯಾನ್, ಪಕ್ಷದ ಮುಖಂಡರಾದ ಮನಹರ್ ಇಬ್ರಾಹಿಂ, ಮಾಧವ್ ಪಾಲನ್, ಎಂ. ಪಿ. ಮೈದಿನಬ್ಬ, ಸರಸು ಡಿ. ಬಂಗೇರ, ಆಶಾ ಅಂಚನ್ ಕಟಪಾಡಿ, ಸುಚರಿತಾ ಲಕ್ಷ್ಮಣ್,ಜ್ಯೋತಿ ಮೆನನ್,ಶೋಭಾ ಬಂಗೇರ, ಸುಮನಾ ಕಿಶೋರ್, ಅರುಣಾ ಕುಮಾರಿ, ಸುಜಾತ ಸುವರ್ಣ, ಪ್ರಮೀಳಾ ಜತನ್ನ, ಸಂಧ್ಯಾ ಬಾಲಕೃಷ್ಣ, ದಯಾನಂದ್ ಬಂಗೇರ, ಸುಧೀರ್ ವೈ., ದೀಪಕ್ ಎರ್ಮಾಳ್, ಪ್ರಶಾಂತ್ ಜತ್ತನ್ನ, ಸುನಿಲ್ ಬಂಗೇರ, ಸುಧೀರ್ ಕರ್ಕೇರ, ಕರ್ಣಾಕರ್ ಪೂಜಾರಿ, ಹಸನ್ ಬಾವ, ಶಾರದಾ ಪೂಜಾರ್ತಿ, ಶರ್ಮಿಳಾ, ಸತೀಶ್ ದೇಜಾಡಿ, ಆಸಿಫ್, ರವೀಂದ್ರ ಮಲ್ಲಾರ್ ಮತ್ತು ಪುರಸಭಾ ಸದಸ್ಯರಾದ ಶಾಂತಲತಾ ಶೆಟ್ಟಿ, ಸುಲೋಚನಾ ಬಂಗೇರ, ಸೌಮ್ಯಾ, ಅಬ್ದುಲ್ ಹಮೀದ್, ಸುರೇಶ್ ದೇವಾಡಿಗ, ಅಶ್ವಿನಿ, ಲೀಲಾ ಕೋಟ್ಯಾನ್ ಮತ್ತಿತರ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News