ಪುತ್ತೂರು: 'ಟೋಪ್ಕೋ ಸಂಭ್ರಮ'ಕ್ಕೆ ಚಾಲನೆ

Update: 2019-08-20 17:01 GMT

ಪುತ್ತೂರು; ಇಲ್ಲಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್‌ನಲ್ಲಿ ಕಾರ್ಯಚರಿಸುತ್ತಿರುವ  `ಟೋಪ್ಕೋ ಝಮ್ ಝಮ್' ಜ್ಯುವೆಲ್ಲರಿ  ಶುಭಾರಂಭಗೊಂಡು ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಪಾದಾರ್ಪಣೆಗೈಯ್ಯುವ ನಿಟ್ಟಿನಲ್ಲಿ ಪುತ್ತೂರು ಶಾಖೆಯಲ್ಲಿ 'ಟೋಪ್ಕೋ ಸಂಭ್ರಮ'  ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಎಲ್.ಟಿ. ಅಬ್ದುಲ್ ರಝಾಕ್, ವಕೀಲರಾದ ಸಾಯಿರಾ ಝುಬೈರ್ ಪುತ್ತೂರು, ಉಪ್ಪಳಿಗೆ ಮಸೀದಿ ಅಧ್ಯಕ್ಷರಾದ ದಾವೂದ್, ಸುಬ್ರಹ್ಮಣ್ಯ  ಬಡಗನ್ನೂರು, ಇಬ್ರಾಹಿಂ ಕುಂಬ್ರ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ ಮೊಹಮ್ಮದ್ ಟಿ.ಕೆ ಸಂಸ್ಥೆಯ‌ ಸಿಬ್ಬಂದಿ ಆಲ್ ಸಬರ್, ಅಝೀಝ್ ಮೊದಲಾದವರು ಉಪಸ್ಥಿತರಿದ್ದರು. ರಶೀದ್ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ದ್ವಿತೀಯ ವಾರ್ಷಿಕೋತ್ಸವಕ್ಕೆ ಭರ್ಜರಿ ಆಫರ್

ಸಂಸ್ಥೆ ದ್ವಿತೀಯ ವಾರ್ಷಿಕೋತ್ಸವಕ್ಕೆ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಕೊಡಲು ತೀರ್ಮಾನಿಸಿದೆ. ಪ್ರತಿಯೊಂದು ಚಿನ್ನಾಭರಣಗಳ ಮೇಕಿಂಜ್ ಚಾರ್ಜಸ್ ಮೇಲೆ ಶೇ.60ರಷ್ಟು, ವಜ್ರಾಭರಣಗಳ ಮೇಲೆ ಶೇ.20ರಷ್ಟು ಹಾಗೂ ಬೆಳ್ಳಿ ಆಭರಣಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ನೀಡಲಿದೆ. ಪ್ರತಿಯೊಂದು ಖರೀದಿಗೂ ಗ್ರಾಹಕರಿಗೆ ವಿಶೇಷ ಉಡುಗೊರೆಗಳೊಂದಿಗೆ ಪ್ರತೀ ವಾರ ಫ್ರಿಡ್ಜ್ ವಿಜೇತರಾಗುವ ಹಾಗೂ ಬಂಪರ್ ಡ್ರಾದಲ್ಲಿ ಸ್ಕೂಟಿ ದ್ವಿಚಕ್ರ ವಿಜೇತರಾಗುವ ಅವಕಾಶವಿದೆ. ಸೆ. 10ರ ವರೆಗೆ 'ಟೋಪ್ಕೋ ಸಂಭ್ರಮ' ಮುಂದುವರೆಯಲಿದೆ. ಈ ಕೊಡುಗೆ ವಿಟ್ಲ ಶಾಖೆಯಲ್ಲೂ ಲಭ್ಯವಿರುವುದು ಎಂದು ಟೋಪ್ಕೋ ಮಾಲಕರಾದ ಮಹಮ್ಮದ್ ಟಿ.ಕೆ. ತಿಳಿಸಿದ್ದಾರೆ.

ಉದ್ಘಾಟನೆ ವೇಳೆ ಇದ್ದವರಿಗೂ ಸಿಕ್ಕಿತು ಗಿಫ್ಟ್

ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿಯಲ್ಲಿ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಆರಂಭಗೊಂಡ 'ಟೋಪ್ಕೋ ಸಂಭ್ರಮ'  ಕಾರ್ಯಕ್ರಮದ ಉದ್ಘಾಟನಾ ವೇಳೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಲಕ್ಕಿ ಕೂಪನ್ ವ್ಯವಸ್ಥೆಯನ್ನು ಸಂಸ್ಥೆ ಮಾಡಿತ್ತು. ಈ ಸಂದರ್ಭದಲ್ಲಿ ಭಾಗವಹಿಸಿದ 50 ಮಂದಿಗೆ ಲಕ್ಕಿ ಡ್ರಾ ಮೂಲಕ ಮೌಲ್ಯಯುತ  ಬಹುಮಾನಗಳನ್ನು ನೀಡಲಾಯಿತು.

ರವಿವಾರವೂ ಕಾರ್ಯಾಚರಿಸಲಿದೆ ಟೋಪ್ಕೋ

ಗ್ರಾಹಕರ ಅನುಕೂಲಕ್ಕಾಗಿ ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿ ಪುತ್ತೂರು ಮತ್ತು ವಿಟ್ಲ ಮಳಿಗೆ ಇನ್ನು ಮುಂದೆ ಪ್ರತೀ ರವಿವಾರವೂ ತೆರೆದು ಕಾರ್ಯಾಚರಿಸಲಿದೆ. ವಿಸ್ತಾರವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇದ್ದು, ಗ್ರಾಹಕರ ಮನಸೂರೆಗೊಳಿಸುವ ವಿವಿಧ ವಿನ್ಯಾಸದ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News