ಟ್ಯಾಲೆಂಟ್ ವತಿಯಿಂದ ಉಚಿತ ಟೈಲರಿಂಗ್ ತರಬೇತಿ ಸರ್ಟಿಫಿಕೇಟ್ ವಿತರಣೆ

Update: 2019-08-21 09:21 GMT

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಉಪ್ಪಿನಂಗಡಿ ಹಳೆಗೇಟು ನೂರುಲ್ ಇಸ್ಲಾಂ ಮದ್ರಸದಲ್ಲಿ ತೆರೆದ ವಿನ್ಯಾಸ ಉಚಿತ ಟೈಲರಿಂಗ್ ಸೆಂಟರ್ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ವಿತರಣಾ ಸಮಾರಂಭವು ಇತ್ತೀಚಿಗೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಮುನೀರಾ ಉಪ್ಪಿನಂಗಡಿ, ಸಂಪನ್ಮೂಲ ಶಿಕ್ಷಕಿ, ಮೋಲಿ ಶಾಜಿ, ಫ್ಯಾಷನ್ ಡಿಸೈನರ್ ಉಪ್ಪಿನಂಗಡಿ, ಝೊಹರಾ ಉಳ್ಳಾಲ, ಸದಸ್ಯೆ, ಆಸರೆ ವಿಮೆನ್ಸ್ ಫೌಂಡೇಶನ್ ಮಂಗಳೂರು ಭಾಗವಹಿಸಿದ್ದರು.

ಆತಿಕಾ ರಫೀಕ್, ಆಸರೆ ವಿಮೆನ್ಸ್ ಫೌಂಡೇಶನ್‍ನ ಉಪಾಧ್ಯಕ್ಷೆ ಹಾಗೂ ಸೆಂಟರ್ ಉಸ್ತುವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಟೈಲರಿಂಗ್ ಶಿಕ್ಷಕಿ ತಶ್ರೀಫಾ ಹಳೆಗೇಟುರನ್ನು ಸನ್ಮಾನಿಸಲಾಯಿತು. ಟೈಲರಿಂಗ್ ವಿದ್ಯಾರ್ಥಿನಿ ಮೆಹನಾಝ್ ಖಿರಾಅತ್ ಪಠಿಸಿದರು. ವಿದ್ಯಾರ್ಥಿನಿ ಆಯಿಶತ್ ರಾಹಿಲ ಸ್ವಾಗತಿಸಿ, ಸುಹೈಲಾ ವಂದಿಸಿದರು. ಆಯಿಶಾ ಕೆ ಕಾರ್ಯಕ್ರಮ ನಿರೂಪಿಸಿದರು. ಆರು ತಿಂಗಳ ಉಚಿತ ಟೈಲರಿಂಗ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 57 ಮಂದಿ ಮಹಿಳೆಯರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News