ಬಜಾಲ್ ವಾರ್ಡ್: ಎಸ್ಡಿಪಿಐ ಅಭ್ಯರ್ಥಿಯಾಗಿ ಕಬೀರ್ ಬಜಾಲ್

Update: 2019-08-22 11:22 GMT

ಮಂಗಳೂರು: ಮಹಾನಗರ ಪಾಲಿಕೆ 53ನೇ ಬಜಾಲ್ ವಾಡ್೯ಗೆ ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಅಭ್ಯರ್ಥಿಯಾಗಿ ಕಬೀರ್ ಬಜಾಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಬಜಾಲ್ 53ನೇ ವಾರ್ಡ್  ಸಮಿತಿಯಿಂದ ನಡೆದ ಅಭ್ಯರ್ಥಿ ಘೋಷಣೆ ಮತ್ತು ಸಮಾವೇಶ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಅಧ್ಯಕ್ಷರಾಗಿ ಬಶೀರ್ ಬಜಾಲ್, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ  ಅಭ್ಯರ್ಥಿ ಕಬೀರ್ ಬಜಾಲ್ ಅವರನ್ನು 53ನೇ ಬಜಾಲ್ ವಾಡ್೯ಗೆ ಅಭ್ಯರ್ಥಿಯಾಗಿ ಘೋಷಣೆ ಮಾಡಿದರು.

ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ಸ್ವಾಗತಿಸಿ,  ಬಶೀರ್ ಬಜಾಲ್ ಮತ್ತು ರಿಯಾಝ್ ಬಜಾಲ್ ನಂತೂರ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News