ಪೊಲಿಪು ಖುವ್ವತುಲ್ ಇಸ್ಲಾಂ ಯಂಗ್ ಮೆನ್ಸ್ ನಿಂದ ನೆರೆ ಸಂತ್ರಸ್ತರಿಗೆ ನೆರವು

Update: 2019-08-22 13:00 GMT

ಕಾಪು, ಆ.22: ಪೊಲಿಪು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಸಂಗ್ರಹಿಸಲಾದ ಪರಿಹಾರ ಸಾಮಾಗ್ರಿಗಳನ್ನು ಇಂದು ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ತರಿಗೆ ಕಳುಹಿಸಿಕೊಡಲಾಯಿತು.

ಪೊಲಿಪು ಜುಮಾ ಮಸೀದಿಯ ಎದುರು ಪರಿಹಾರ ಸಾಮಾಗ್ರಿ ಹೊತ್ತ ಲಾರಿಗೆ ಕಾಪು ಉಸ್ತಾದ್ ಪಿ.ಬಿ. ಅಹಮದ್ ಮುಸ್ಲಿಯಾರ್ ದುವಾ ನೆರ ವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಅಕ್ರಂ ಗುಡ್‌ವಿಲ್, ಆರೀಫ್ ಕಲ್ಯ, ಹುಸೈನ್ , ಅಶ್ರಫ್, ಅಬ್ದುಲ್ ಅಝೀಝ್ ಮೊದಲಾದವರು ಉಪಸ್ಥಿತರಿದ್ದರು.

10 ಕ್ವಿಂಟಾಲ್ ಅಕ್ಕಿ ಸೇರಿದಂತೆ ಒಂದೂವರೆ ಲಕ್ಷ ರೂ. ಮೌಲ್ಯದ ವಿವಿಧ ದಿನಬಳಕೆಯ ವಸ್ತುಗಳನ್ನು ಸಂಗ್ರಹಿಸಲಾಗಿದ್ದು, ಇವುಗಳನ್ನು ಸ್ವತಃ ಸಂಸ್ಥೆಯ ಕಾರ್ಯಕರ್ತರ ತಂಡ ಕೊಡಗಿಗೆ ತೆರಳಿ ಅರ್ಹ ಸಂತ್ರಸ್ತರಿಗೆ ವಿತರಿಸುವ ಕಾರ್ಯ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News