15 ಮಂದಿ ಗುತ್ತಿಗೆ ನೌಕರರು ಮನೆಗೆ: ಆರೋಗ್ಯ ಇಲಾಖೆ ಕ್ರಮಕ್ಕೆ ಸಿಐಟಿಯು ಖಂಡನೆ

Update: 2019-08-22 15:21 GMT

ಉಡುಪಿ, ಆ. 22: ಇತ್ತೀಚೆಗೆ ಉಡುಪಿ ಜಿಲ್ಲೆಯ ಆರೋಗ್ಯ ಇಲಾಖೆ ಯಲ್ಲಿ ಗುತ್ತಿಗೆ ನೌಕರರಾಗಿ ನೇಮಕಗೊಂಡ ಲ್ಯಾಬ್ ಟೆಕ್ನೀಷಿಯನ್ಸ್ 05 ಮಂದಿ, ಪಾರ್ಮಸಿಸ್ಟ್ 05 ಮಂದಿ ಹಾಗೂ ಐವರು ಚಾಲಕರನ್ನು ನೌಕರಿ ಯಿಂದ ತೆಗೆದುಹಾಕಿದ ಕ್ರಮವನ್ನು ಉಡುಪಿ ಜಿಲ್ಲಾ ಸಿಐಟಿಯು ತೀವ್ರವಾಗಿ ಖಂಡಿಸಿದೆ.

‘ಇದು ತೀರಾ ಅನ್ಯಾಯ ಹಾಗೂ ಕಾನೂನು ಬಾಹಿರವಾಗಿದೆ. ಇದನ್ನು ಸಿಐಟಿಯು ಜಿಲ್ಲಾ ಸಮಿತಿ ಖಂಡಿಸುತ್ತದೆ. ಕೂಡಲೇ ಅವರನ್ನು ನೌಕರರನ್ನಾಗಿ ಮರು ನೇಮಕಮಾಡಿಕೊಂಡು ವಿವಾದವನ್ನು ಇತ್ಯರ್ಥಗೊಳಿಸಬೇಕೆಂದು ಸಿಐಟಿಯು ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ತಪ್ಪಿದ್ದಲ್ಲಿ ಗುತ್ತಿಗೆ ನೌಕರರೆಲ್ಲಾ ಸಂಘಟಿತರಾಗಿ ಪ್ರತಿಭಟನೆಗೆ ಮುಂದಾಗಲಿದ್ದಾರೆ’ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News