ಗೃಹ ಕಾರ್ಯದರ್ಶಿಯಾಗಿ ಅಜಯ್ ಕುಮಾರ್ ಭಲ್ಲಾ ನೇಮಕ

Update: 2019-08-22 16:16 GMT

ಹೊಸದಿಲ್ಲಿ, ಆ.22: ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಅಜಯ್ ಕುಮಾರ್ ಭಲ್ಲಾರನ್ನು ಕೇಂದ್ರ ಸರಕಾರ ನೇಮಿಸಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ನೇಮಕಾತಿ ಸಮಿತಿ ಭಲ್ಲಾ ನೇಮಕಕ್ಕೆ ಅನುಮೋದನೆ ನೀಡಿದೆ.

ಇದುವರೆಗೆ ಈ ಹುದ್ದೆಯಲ್ಲಿದ್ದ ರಾಜೀವ್ ಗೌಬ ಬುಧವಾರ ಸಂಪುಟ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಈ ನೇಮಕಾತಿ ನಡೆದಿದ್ದು ಭಲ್ಲಾ ಸೇವಾವಧಿ 2021ರ ಆಗಸ್ಟ್‌ನಲ್ಲಿ ಅಂತ್ಯವಾಗಲಿದೆ. ಅಸ್ಸಾಂ-ಮೇಘಾಲಯ ಪದವೃಂದದ 1984 ಐಎಎಸ್ ಅಧಿಕಾರಿಯಾಗಿರುವ ಭಲ್ಲಾ ಜುಲೈ 24ರಂದು ಗೃಹ ಸಚಿವಾಲಯದಲ್ಲಿ ವಿಶೇಷ ಕರ್ತವ್ಯದ ಮೇಲೆ ಅಧಿಕಾರಿಯಾಗಿ ನಿಯೋಜಿತರಾಗಿದ್ದರು. ಇದಕ್ಕೂ ಮುನ್ನ ಕೇಂದ್ರ ವಿದ್ಯುತ್ ಇಲಾಖೆಯ ಕಾರ್ಯದರ್ಶಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News