ಡಿಎನ್‌ಎ ಪರೀಕ್ಷೆಗೆ ಪ್ರಧಾನಿ ನೆರವು ಕೋರಿದ ನೇತಾಜಿ ಪುತ್ರಿ

Update: 2019-08-22 17:22 GMT

ಕೋಲ್ಕತಾ, ಆ.22: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಾವಿಗೆ ಸಂಬಂಧಿಸಿದಂತೆ ಹೊಸ ಸಾಕ್ಷಿಗಳನ್ನು ಕಲೆ ಹಾಕಲು ಬಯಸಿರುವ ಅವರ ಪುತ್ರಿ ನೇತಾಜಿಯವರ ಬೂದಿಯ ಡಿಎನ್‌ಎ ಪರೀಕ್ಷೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೆರವನ್ನು ಕೋರಿದ್ದಾರೆ. ಈ ಹಿಂದಿನ ಸರಕಾರದಲ್ಲಿದ್ದ ಕೆಲವರರಿಗೆ ನೇತಾಜಿ ಸಾವಿನ ರಹಸ್ಯ ಬಗೆಹರಿಯುವುದು ಬೇಕಾಗಿರಲಿಲ್ಲ ಎಂದು ಆರೋಪಿಸಿರುವ ಅನಿತಾ ಬೋಸ್ ಪಫ್, ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಬೋಸ್ ಅವರ ಸಾವಿನ ಸುತ್ತ ಇರುವ ರಹಸ್ಯವನ್ನು ಬೇಧಿಸಲು ಮೋದಿ ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ತನ್ನ ತಂದೆ ಆಗಸ್ಟ್ 18, 1945ರಲ್ಲಿ ನಡೆದ ವಿಮಾನಪಘಾತದಲ್ಲಿ ಮೃತಪಟ್ಟಿದ್ದರು ಎಂದೇ ನಾನು ನಂಬಿದ್ದೇನೆ. ಇದಕ್ಕೆ ವಿರುದ್ಧವಾದ ಸಾಕ್ಷಿ ಸಿಗುವವರೆಗೂ ಹಾಗೆಯೇ ನಂಬುತ್ತೇನೆ ಎಂದು ಅನಿತಾ ತಿಳಿಸಿದ್ದಾರೆ. ಜಪಾನ್‌ನ ರೆಂಕೋಜಿ ಮಂದಿರದಲ್ಲಿ ಇರಿಸಲಾಗಿರುವ ಬೋಸ್ ಅವರ ಬೂದಿಯ ಡಿಎನ್‌ಎ ಪರೀಕ್ಷೆ ನಡೆಸಲು ಸಹಕರಿಸುವಂತೆ ಪ್ರಧಾನಿ ಮೋದಿ ಮತ್ತು ಜಪಾನ್‌ನ ಅಧಿಕಾರಿಗಳಲ್ಲಿ ಮನವಿ ಮಾಡುವುದಾಗಿ ಅನಿತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News