ಪಾವತಿ ಬಾಕಿ ಉಳಿಸಿರುವ ಹಿನ್ನೆಲೆ: ಏರ್ ಇಂಡಿಯಾಕ್ಕೆ ಇಂಧನ ಪೂರೈಕೆ ನಿಲ್ಲಿಸಿದ ತೈಲ ಕಂಪೆನಿಗಳು

Update: 2019-08-23 05:38 GMT

ಹೊಸದಿಲ್ಲಿ, ಆ.23: ಪಾವತಿ ಬಾಕಿ ಉಳಿಸಿರುವ ಹಿನ್ನೆಲೆಯಲ್ಲಿ ದೇಶದ ಆರು ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾಕ್ಕೆ ತೈಲ ಪೂರೈಕೆಯನ್ನು ಗುರುವಾರ ಮಧ್ಯಾಹ್ನದಿಂದ ತೈಲು ಮಾರುಕಟ್ಟೆ ಕಂಪೆನಿಗಳು(ಒಎಂಸಿ) ಸ್ಥಗಿತಗೊಳಿಸಿವೆ ಎಂದು ಹಿರಿಯ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಯಾನ ಹಾರಾಟದ ಕಾರ್ಯಾಚರಣೆಗಳು ಸಾಮಾನ್ಯವಾಗಿದ್ದು, ಅಬಾಧಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರಕಾರಿ ಸ್ವಾಮ್ಯದ ಒಎಂಸಿ, ಕೊಚ್ಚಿ, ವಿಶಾಖಪಟ್ಟಣ, ಮೊಹಾಲಿ, ರಾಂಚಿ, ಪುಣೆ ಹಾಗೂ ಪಾಟ್ನಾ ಏರ್ಪೋರ್ಟ್ಗಳಲ್ಲಿ ಸುಮಾರು ಸಂಜೆ 4 ಗಂಟೆಯಿಂದ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ಏರ್ ಇಂಡಿಯಾದ ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.

ಇಕ್ವಿಟಿ ಬೆಂಬಲದ ಕೊರತೆಯಲ್ಲಿ ಏರ್ ಇಂಡಿಯಾ ಸಾಲದ ಹೊಣೆಗಾರಿಕೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಆರ್ಥಿಕ ನಿರ್ವಹಣೆ ಈಗ ಉತ್ತಮವಾಗಿದೆ. ಇದೀಗ ಲಾಭದಾಯಕವಾಗಿ ಮುನ್ನಡೆಯುತ್ತಿದ್ದೇವೆ. ಸಂಸ್ಥೆಯು ಕೆಲವೊಂದು ಸಮಸ್ಯೆಯ ಹೊರತಾಗಿಯೂ ಉತ್ತಮ ನಿರ್ವಹಣೆ ತೋರುತ್ತಿದೆ ಎಂದು ಏರ್ ಇಂಡಿಯಾ ವಕ್ತಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News