ಕಾಫಿ ಡೇ ಮಾಲಕ ಸಿದ್ಧಾರ್ಥ ಸಾವು ಪ್ರಕರಣ: ಪೊಲೀಸ್ ಕೈಸೇರಿದ ಎಫ್.ಎಸ್.ಎಲ್. ವರದಿ

Update: 2019-08-23 10:36 GMT

ಮಂಗಳೂರು, ಆ.23: ಕಾಫಿ ಡೇ ಮಾಲಕ ಸಿದ್ಧಾರ್ಥ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ(ಎಫ್.ಎಸ್.ಎಲ್.)ಯು ಶುಕ್ರವಾರ ಮಂಗಳೂರು ಪೊಲೀಸರ ಕೈಸೇರಿದೆ.

ಈ ವರದಿ ಮರಣೋತ್ತರ ಪರೀಕ್ಷೆ ನಡೆಸಿದ ಫೋರೆನಿಕ್ಸ್ ತಜ್ಞರ ಕೈಗೆ ಗುರುವಾರವೇ ತಲುಪಿದ್ದು, ಅಂತಿಮ ಹಂತದ ವರದಿಯು ಪೊಲೀಸ್ ಆಯುಕ್ತರ ಮೂಲಕ ಪ್ರಕರಣದ ತನಿಖಾಧಿಕಾರಿಗೆ ಸಲ್ಲಿಕೆಯಾಗಿದೆ.

ಈ ಕುರಿತು 'ವಾರ್ತಾಭಾರತಿ'ಗೆ ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, "ಪ್ರಕರಣದ ಅಂತಿಮ ಹಂತದ ಎಫ್.ಎಸ್.ಎಲ್. ವರದಿ ತಮ್ಮ ಕೈ ಸೇರಿದೆ. ತನಿಖಾ ಉದ್ದೇಶದಿಂದ ವರದಿಯಲ್ಲಿನ ಅಂಶಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ" ಎಂದು ತಿಳಿಸಿದರು.

ಈ ವರದಿಯನ್ನು ಮರಣೋತ್ತರ ನಡೆಸಿದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಿಗೆ ಕಳುಹಿಸಿ ಕೊಡುವುದಾಗಿ ಆಯುಕ್ತರು ತಿಳಿಸಿದರು.

ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಸಿದ್ಧಾರ್ಥ ಸಾವು ಪ್ರಕರಣವು ದಿನದಿಂದ ದಿನಕ್ಕೆ ಹೊಸ ರೂಪ, ತಿರುವು ಪಡೆಯುತ್ತಿತ್ತು.

ಆಗಸ್ಟ್ ಮೊದಲ ವಾರ ಪ್ರಕರಣದ ಪ್ರಾಥಮಿಕ ಹಂತದ ವರದಿ ಸಲ್ಲಿಕೆಯಾಗಿತ್ತು.

ಸಿದ್ದಾರ್ಥ ಜುಲೈ 29ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಜುಲೈ 31ರಂದು ಹೊಯಿಗೆ ಬಜಾರ್‌ ಬಳಿ ನದಿ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News