'ಬ್ರಿಟಾನಿಯಾ' ಚಾರ್ಟ್ ತೋರಿಸಿ 'ಪಾರ್ಲೆ ಜಿ' ವರದಿ ಸುಳ್ಳೆಂದ ಬಿಜೆಪಿ ರಾಷ್ಟ್ರೀಯ ಕಾನೂನು ಘಟಕ ಉಸ್ತುವಾರಿ!

Update: 2019-08-23 10:40 GMT

ಹೊಸದಿಲ್ಲಿ: ಪಾರ್ಲೆ ಬಿಸ್ಕೆಟ್ ಬಗ್ಗೆ ಟ್ವೀಟ್‍ನಲ್ಲಿ ಬ್ರಿಟಾನಿಯಾ ಸಂಸ್ಥೆಯ 2018-19ನೇ ಸಾಲಿನ ವಾರ್ಷಿಕ ವರದಿಯನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಕಾನೂನು ಘಟಕದ ಮುಖ್ಯಸ್ಥೆ ಚಾರು ಪ್ರಜ್ಞಾ ನಗೆಪಾಟಲಿಗೀಡಾಗಿದ್ದಾರೆ.

ಆಗಸ್ಟ್ 21ರಂದು ಪಾರ್ಲೆ ಪ್ರಾಡೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಹೇಳಿಕೆ ನೀಡಿ, 10 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸುವ ಮುನ್ಸೂಚನೆ ನೀಡಿತ್ತು. ಆರ್ಥಿಕ ಪ್ರಗತಿ ಕುಂಠಿತಗೊಂಡಿರುವುದು ಹಾಗೂ ಗ್ರಾಮೀಣ ಭಾರತದಲ್ಲಿ ಬಳಕೆ ಕುಸಿದಿರುವುದರಿಂದ ಉತ್ಪಾದನೆ ಕಡಿತ ಅನಿವಾರ್ಯ ಎಂದು ಹೇಳಿತ್ತು. ಉತ್ಪಾದನೆ ಕಡಿತದಿಂದಾಗಿ 8-10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಂಸ್ಥೆ ನಿರ್ಧರಿಸಿತ್ತು. ಸರ್ಕಾರ ತಕ್ಷಣ ಮಧ್ಯಪ್ರವೇಶಿಸದಿದ್ದರೆ, ಈ ಹುದ್ದೆಗಳನ್ನು ನಿರ್ಮೂಲನೆ ಮಾಡುವುದು ಅನಿವಾರ್ಯ ಎಂದು ಹೇಳಿಕೆ ನೀಡಲಾಗಿತ್ತು.

ಮಾಯಾಂಕ್ ಶಾ ನೀಡಿದ ಈ ಹೇಳಿಕೆಯನ್ನು ಸುಳ್ಳು ಎಂದು ಪ್ರತಿಪಾದಿಸುವ ನಿಟ್ಟಿನಲ್ಲಿ ಚಾರು, ಪಾರ್ಲೆ ಬದಲಾಗಿ ಬ್ರಿಟಾನಿಯಾ ಅಂಕಿ ಅಂಶಗಳನ್ನು ಬಳಸಿಕೊಂಡಿದ್ದರು. "ಅವರ ವಾರ್ಷಿಕ ವರದಿಯನ್ನು ಪರಿಶೀಲಿಸಿ. 4480 ಉದ್ಯೋಗಿಗಳಿದ್ದಾರೆ. ಅವರು 10 ಸಾವಿರ ಉದ್ಯೋಗಿಗಳನ್ನು ಹೇಗೆ ವಜಾಗೊಳಿಸಲು ಸಾಧ್ಯ?" ಎಂದು ಟ್ವೀಟ್ ಮಾಡಿದ್ದರು.

ಈ ತಪ್ಪನ್ನು ಟ್ವಿಟ್ಟರಿಗರು ಎತ್ತಿ ಹಿಡಿದು ಆಡಳಿತಾರೂಢ ಪಕ್ಷದ ಕಾನೂನು ಘಟಕವನ್ನು ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News