ಬೀಳುವ ಸ್ಥಿತಿಯಲ್ಲಿ ಹಳೆಯ ಮುಲ್ಕಿ ಹೃದಯ ಭಾಗದ ಕಟ್ಟಡ

Update: 2019-08-23 17:42 GMT

ಮುಲ್ಕಿ: ಇಲ್ಲಿನ ಬಸ್ಸು ನಿಲ್ದಾಣದ ಕೆಳಭಾಗದಿಂದ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಪುರಾತನ ಕಾಲದ ಕಟ್ಟಡವೊಂದು ಬೀಳುವ ಸ್ತಿತಿಯಲ್ಲಿದ್ದು ಕೂಡಲೇ ನೆಲಸಮಗೊಳಿಸಲು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಝಾಕ್ ಆಗ್ರಹಿಸಿದ್ದಾರೆ.

ಮುಲ್ಕಿ ಬಸ್ಸು ನಿಲ್ದಾಣದ ಹೃದಯ ಭಾಗದಲ್ಲಿರುವ ಕಟ್ಟಡವು ಮುಲ್ಕಿ ಬಸ್ಸು ನಿಲ್ದಾಣದ ಕೆಳಭಾಗದ ಗೌರವ್ ಭಾರ್(ಈಗ ಮುಚ್ಚಿದೆ)ಪಕ್ಕದಲ್ಲಿದ್ದು ಅಪಾಯಕಾರಿ ಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ಬಿರುಕು ಬಿಡುತ್ತಾ ಅಂತಿಮ ದಿನಗಳನ್ನು ಎಣಿಸುತ್ತಿದೆ. ರುಕ್ಯ ನೂರುಮಹಮ್ಮದ್ ಎಂಬವರ ಹೆಸರಿನಲ್ಲಿರುವ ಈ ಕಟ್ಟಡದ ಪಕ್ಕದಲ್ಲಿರುವ ರಸ್ತೆಯಲ್ಲಿ ದಿನಕ್ಕೆ ನೂರಾರು ವಾಹನಗಳು ಹೋಗುತ್ತಿದ್ದು, ಪಾದಚಾರಿಗಳು ನಡೆದಾಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಕಟ್ಟಡದ ಮಾಲಕರಿಗೆ, ಮುಲ್ಕಿ ನಗರ ಪಂಚಾಯತಿಗೆ ಹಾಗೂ ಸಂಬಂದಪಟ್ಟ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತರೆ ಅಬ್ದುಲ್ ರಝಾಕ್.

ಶುಕ್ರವಾರ ಸ್ಥಳೀಯರು ಕಟ್ಟಡದಿಂದ ಅಪಾಯವಾಗುತ್ತದೆ ಎಂದು ಮುಲ್ಕಿ ಠಾಣೆಗೆ ಹಾಗೂ ಸುರತ್ಕಲ್ ಉತ್ತರ ಠಾಣೆಗೆ ದೂರು ನೀಡಿದ್ದು ಪೊಲೀಸರು ಮುಂಜಾಗರೂಕತೆಯಿಂದ ಬ್ಯಾರಿಕೇಡರ್ ಇರಿಸಿ ರಸ್ತೆ ಸಂಚಾರ ನಿಷೇದಿಸಿದ್ದಾರೆ. ಆದಷ್ಟು ಬೇಗ ಕಟ್ಟಡವನ್ನು ತೆರವುಗೊಳಿಸಿ ಮುಂದೆ ಆಗುವ ಅನಾಹುತವನ್ನು ಸಂಬಂದಪಟ್ಟವರು ತಪ್ಪಿಸಬೇಕಾಗಿದೆ ಎಂದು ಅಬ್ದುಲ್ ರಝಾಕ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News