ಅಬುಧಾಬಿ ತಲುಪಿದ ಪ್ರಧಾನಿ ನರೇಂದ್ರ ಮೋದಿ

Update: 2019-08-24 05:36 GMT
Photo: (MEAIndia/Twitter)

ಪ್ಯಾರಿಸ್, ಆ.24: ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ರಾತ್ರಿ ಅಬುಧಾಬಿಗೆ ತಲುಪಿದ್ದು, ಶನಿವಾರ ಅಬುಧಾಬಿ ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ಅವರನ್ನು ಭೇಟಿಯಾಗಿ ಪರಸ್ಪರ ಆಸಕ್ತಿಯ ದ್ವಿಪಕ್ಷೀಯ, ಪ್ರಾಂತೀಯ ಹಾಗೂ ಅಂತರ್ರಾಷ್ಟ್ರೀಯ ವಿಚಾರಕ್ಕೆ ಸಂಬಂಧಿಸಿ ಚರ್ಚಿಸಲಿದ್ದಾರೆ.

ಮೋದಿ ಅನಿವಾಸಿ ಭಾರತೀಯರೊಂದಿಗೆ ಶನಿವಾರ ಸಂವಹನ ನಡೆಸಲಿದ್ದಾರೆ. ವಿದೇಶದಲ್ಲಿ ನಗದುರಹಿತ ವಹಿವಾಟಿನ ಜಾಲವನ್ನು ವಿಸ್ತರಿಸಲು ಉಭಯ ದೇಶಗಳು ಅಧಿಕೃತವಾಗಿ ರುಪೇ ಕಾರ್ಡ್ನ್ನು ಅನಾವರಣಗೊಳಿಸಲಿವೆ. ಸಿಂಗಾಪುರದ ಬಳಿಕ ಯುಎಇಯಲ್ಲಿ ರುಪೇ ಕಾರ್ಡ್ನ್ನು ಅನಾವರಣಗೊಳಿಸಲು ಪ್ರಧಾನಿ ಮೋದಿ ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷರ ಅರಮನೆಯಲ್ಲಿ ವಿದ್ಯುಕ್ತ ಸ್ವಾಗತ ಕಾರ್ಯಕ್ರಮದ ನಡೆಯಲಿದ್ದು, ಆ ನಂತರ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ. ಜಮ್ಮು-ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿರುವ ಯುಎಇ, ಈ ವರ್ಷಾರಂಭದಲ್ಲಿ ನಡೆದಿದ್ದ ಇಸ್ಲಾಮಿಕ್ ಸಹಕಾರ ಸಂಘಟನೆಗೆ(ಒಐಸಿ)ಆಹ್ವಾನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News