ಕಾಶ್ಮೀರದಲ್ಲಿ ಸಹಜ ಸ್ಥಿತಿ ಇದ್ದರೆ ರಾಜಕೀಯ ನಾಯಕರ ಬಂಧನ ಯಾಕೆ : ಗುಲಾಂ ನಬಿ ಆಝಾದ್ ಪ್ರಶ್ನೆ

Update: 2019-08-24 15:45 GMT

ಹೊಸದಿಲ್ಲಿ, ಆ. 24: ಜಮ್ಮು ಹಾಗೂ ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಸಿದೆ ಎಂಬ ಪ್ರತಿಪಾದನೆಗೆ ಶನಿವಾರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್, ಹಾಗಾದರೆ ರಾಜ್ಯದಲ್ಲಿ ಹಲವು ರಾಜಕೀಯ ನಾಯಕರನ್ನು ಬಂಧನದಲ್ಲಿ ಇರಿಸಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

 ‘‘ಪರಿಸ್ಥಿತಿ ಸಹಜ ಸ್ಥಿತಿಯಲ್ಲಿ ಇದ್ದರೆ, ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸುವ ಅಗತ್ಯ ಏನು ? ಒಂದು ವೇಳೆ ಪರಿಸ್ಥಿತಿ ಸಹಜವಾಗಿದ್ದರೆ, ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿದ್ದ ನನ್ನನ್ನು ಮನೆಗೆ ತೆರಳಲು ಅವಕಾಶ ನೀಡುತ್ತಿಲ್ಲ ಯಾಕೆ ?’’ ಎಂದು ಇಲ್ಲಿನ ತನ್ನ ನಿವಾಸದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

ಒಂದೆಡೆ ಸರಕಾರ ಎಲ್ಲವೂ ಸಹಜ ಸ್ಥಿತಿಯಲ್ಲಿ ಇದೆ ಎಂದು ಹೇಳುತ್ತಿದೆ. ಇನ್ನೊಂದೆಡೆ ಅಲ್ಲಿಗೆ ಯಾರಿಗೂ ತೆರಳಲು ಅವಕಾಶ ನೀಡುತ್ತಿಲ್ಲ. ಇಂತಹ ವಿರೋಧಾಬಾಸವನ್ನು ನಾನು ಎಂದಿಗೂ ನೋಡಿಲ್ಲ ಎಂದು ಅವರು ಹೇಳಿದರು.

  370ನೇ ವಿಧಿ ರದ್ದುಗೊಳಿಸಿದ ಕೆಲವು ದಿನಗಳ ಬಳಿಕ ಸ್ಥಿತಿಗತಿ ಅರಿಯಲು ಜಮ್ಮು ಹಾಗೂ ಕಾಶ್ಮೀರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದ ಪ್ರತಿಪಕ್ಷಗಳ ನಿಯೋಗದಲ್ಲಿ ಗುಲಾಂ ನಬಿ ಆಝಾದ್ ಕೂಡ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News