ಸಾವರ್ಕರ್ ಮೇಲೆ ನಂಬಿಕೆಯಿಲ್ಲದವರನ್ನು ಸಾರ್ವಜನಿಕವಾಗಿ ಥಳಿಸಬೇಕು: ಉದ್ಧವ್ ಠಾಕ್ರೆ

Update: 2019-08-24 17:05 GMT

ಮುಂಬೈ,ಆ.24: ಸಾವರ್ಕರ್ ಅವರ ಸಿದ್ಧಾಂತದಲ್ಲಿ ನಂಬಿಕೆಯಿಲ್ಲದವರನ್ನು ಸಾರ್ವಜನಿಕವಾಗಿ ಥಳಿಸಬೇಕು ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 “ವೀರ್ ಸಾವರ್ಕರ್ ಮೇಲೆ ನಂಬಿಕೆಯಿಲ್ಲದವರನ್ನು ಸಾರ್ವಜನಿಕವಾಗಿ ಥಳಿಸಬೇಕು ಯಾಕೆಂದರೆ ಅವರಿಗೆ ಭಾರತದ ಸ್ವಾತಂತ್ರ್ಯ ದಲ್ಲಿ ಸಾವರ್ಕರ್ ಅವರ ಹೋರಾಟ ಮತ್ತು ಪ್ರಾಮುಖ್ಯತೆಯ ಅರಿವಿಲ್ಲ. ರಾಹುಲ್ ಗಾಂಧಿಯೂ ಈ ಹಿಂದೆ ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ” ಎಂದು ಠಾಕ್ರೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ದಿಲ್ಲಿ ವಿಶ್ವವಿದ್ಯಾನಿಲಯದ ಅವರಣದಲ್ಲಿ ಸ್ಥಾಪಿಸಿದ್ದ ಸಾವರ್ಕರ್ ಪ್ರತಿಮೆಗೆ ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಸಂಘಟನೆ (ಎನ್‌ಎಸ್‌ಯುಐ)ಯ ಸದಸ್ಯರು ಮಸಿ ಬಳಿದ ಹಿನ್ನೆಲೆಯಲ್ಲಿ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. ಸಾವರ್ಕರ್ ಪ್ರತಿಮೆಯ ಜೊತೆಗೆ ಎಬಿವಿಪಿ ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರ ಪ್ರತಿಮೆಯನ್ನೂ ಸ್ಥಾಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News