ಆ್ಯಂಬುಲೆನ್ಸ್ ಲಭಿಸದೆ ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2019-08-24 17:23 GMT

ಬುರ್ಹನ್‌ಪುರ,ಆ.24: ಆ್ಯಂಬುಲೆನ್ಸ್ ಸಿಗದ ಕಾರಣದಿಂದ ಮಹಿಳೆಯೊಬ್ಬರು ರಾಜ್ಯ ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದ ಬುರ್ಹನ್‌ಪುರ್‌ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕಮಲಾ ಬಾಯಿ ಎಂಬ ಗರ್ಭಿಣಿಯನ್ನು ಆಕೆಯ ಪತಿ ಶುಕ್ರವಾರ ಮೋಟಾರ್ ಬೈಕ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಹೇಳಿಕೆ ನೀಡಿದ ಮಹಿಳೆಯ ಅತ್ತೆ, “ನಾವು ಎಎನ್‌ಎಂ (ಸಹಾಯಕ ನರ್ಸ್ ಸೂಲಗಿತ್ತಿ)ಗೆ ಕರೆ ಮಾಡಿ ಹೆರಿಗೆ ನೋವಿನ ಬಗ್ಗೆ ತಿಳಿಸಿದ್ದೆವು ಮತ್ತು ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಕಳುಹಿಸುವಂತೆ ಮನವಿ ಮಾಡಿದ್ದೆವು. ಆದರೆ ಆ್ಯಂಬುಲೆನ್ಸ್ ಬರಲೆ ಇಲ್ಲ. ಹಾಗಾಗಿ ಆಕೆಯ ಗಂಡ ಆಕೆಯನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ಆಕೆ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ” ಎಂದು ತಿಳಿಸಿದ್ದಾರೆ.

ಕಮಲಾ ಬಾಯಿಯನ್ನು ಆಕೆಯ ಪತಿ ಶಹಪುರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಲ್ಲಿನ ವೈದ್ಯರು ತಾಯಿ ಮತ್ತು ನವಜಾತ ಶಿಶುವಿನ ಸೂಕ್ತ ಆರೈಕೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News