ಮಂಗಳೂರು: ಚೈಲ್ಡ್‌ಲೈನ್‌ನಿಂದ ಬಾಲಕಿಯ ರಕ್ಷಣೆ

Update: 2019-08-25 12:54 GMT

ಮಂಗಳೂರು, ಆ.25: ಚೈಲ್ಡ್‌ಲೈನ್-1098 (ಮಕ್ಕಳ ಸಹಾಯವಾಣಿ)ಸಂಸ್ಥೆಯು ಶನಿವಾರ ರಾತ್ರಿ 7:30ರ ವೇಳೆಗೆ ನಗರ ಹೊರವಲಯದ ತೋಟಬೇಂಗ್ರೆಯ ಬಳಿ 11 ವರ್ಷ ಪ್ರಾಯದ ಮಧ್ಯಪ್ರದೇಶ ಮೂಲದ ಬಾಲಕಿಯನ್ನು ರಕ್ಷಿಸಿದೆ.

ಈ ಬಾಲಕಿಯು ಪೋಷಕರಿಲ್ಲದೆ ಏಕಾಂಗಿಯಾಗಿ ಅಳುತ್ತಿದ್ದಾಳೆ ಎಂಬುದಾಗಿ ಸಾರ್ವಜನಿರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚೈಲ್ಡ್‌ಲೈನ್‌ನ ತಂಡವು ಮಹಿಳಾ ಸಿಬ್ಬಂದಿಯ ಜೊತೆ ಪಣಂಬೂರು ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಮಾಜಿ ಕಾರ್ಪೊರೇಟರ್ ಮೀರಾ ಕರ್ಕೆರಾ ಅವರ ಸಹಕಾರದಿಂದ ಸ್ಥಳಕ್ಕೆ ತೆರಳಿ ಬಾಲಕಿಯನ್ನು ರಕ್ಷಿಸಿ ಬೋಂದೆಲ್ ಬಳಿಯ ಜಿಲ್ಲಾಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಿ ಪುನರ್ವಸತಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿ ಅಶೋಕ್ ಕುಮಾರ್, ಕಮಲಾಕ್ಷ, ಚೈಲ್ಡ್‌ಲೈನ್‌ನ ದೀಕ್ಷಿತ್ ಅಚ್ರಪ್ಪಾಡಿ, ಜಯಂತಿ ಕೋಕಳ, ರಂಜಿತ್ ಕಾಡುತೋಟ ರಕ್ಷಣಾ ತಂಡದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News