ಮಂಗಳೂರು: ‘ಇಸ್ಲಾಂ: ತೌಹೀದಾಗಿದೆ ಪ್ರಧಾನ’ ಅಭಿಯಾನದ ಸಮಾರೋಪ ಸಮ್ಮೇಳನ

Update: 2019-08-25 14:41 GMT

ಮಂಗಳೂರು, ಆ. 25: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್(ಎಸ್‌ಕೆಎಸ್‌ಎಂ) ಮತ್ತು ಇತ್ತಿಹಾದು ಶುಬ್ಬಾನುಲ್ ಮುಜಾಹಿದೀನ್ (ಐಎಸ್‌ಎಂ ಕೇರಳ) ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ‘ಇಸ್ಲಾಂ: ತೌಹೀದಾಗಿದೆ ಪ್ರಧಾನ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಒಂದು ವರ್ಷ ನಡೆದ ಅಭಿಯಾನದ ಸಮಾರೋಪ ಸಮ್ಮೇಳನವು ಮಂಗಳೂರು ನಗರದ ಪುರಭವನದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮವನ್ನು ಕೆಎನ್‌ಎಂ ಉಪಾಧ್ಯಕ್ಷ ಡಾ. ಹುಸೈನ್ ಮಡವೂರು ಉದ್ಘಾಟಿಸಿ ಮಾತನಾಡಿ, ಶಾಂತಿಯೇ ಇಸ್ಲಾಂ ಧರ್ಮದ ಮೂಲ ಆಶಯವಾಗಿದೆ. ಕೊಲ್ಲುವುದು, ಹಿಂಸೆಯನ್ನು ಪ್ರೇರೇಪಿಸುವುದನ್ನು ಇಸ್ಲಾಂ ಎಂದಿಗೂ ಸಹಿಸುವುದಿಲ್ಲ. ಶಾಂತಿ, ಸಹಬಾಳ್ವೆ, ಭ್ರಾತೃತ್ವವು ವಿಶ್ವ ಶ್ರೇಷ್ಠ ಇಸ್ಲಾಂ ಧರ್ಮದ್ದಾಗಿದೆ ಎಂದರು.

ಮೊದಲ ಬಾರಿಗೆ 1988ರಲ್ಲಿ ಮಂಗಳೂರಿನ ಬದ್ರಿಯಾ ಕಾಲೇಜಿನಲ್ಲಿ ‘ಕುರ್‌ಆನ್ ಕಲಿಯಿರಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಂದಲೇ ಕುರ್‌ಆನ್ ಕಲಿಕೆಯ ಚಳವಳಿ ಆರಂಭವಾಯಿತು. ಇಸ್ಲಾಂ ಧರ್ಮದ ಅರಿವನ್ನು ಮೂಡಿಸುವುದು ನಮ್ಮ ಚಳವಳಿಯ ಧ್ಯೇಯವಾಗಿದೆ. ಇಲ್ಲಿಯವರೆಗೆ 100ಕ್ಕೂ ಹೆಚ್ಚು ಸೆಮಿನಾರ್, ಶಿಬಿರಗಳು, ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಎಸ್‌ಕೆಎಸ್‌ಎಂ ಅಧ್ಯಕ್ಷ ಬಶೀರ್ ಅಹ್ಮದ್ ಶಾಲಿಮಾರ್ ಸಮಾರೋಪ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಎಸ್‌ಕೆಎಸ್‌ಎಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ದಾರುಲ್ ಉಲೂಮ್ ಮಹಿಳಾ ಅರೆಬಿಕ್ ಕಾಲೇಜಿನ ಅಧ್ಯಕ್ಷ ಮೂಸ ತಲಪಾಡಿ, ಗೌರವಾಧ್ಯಕ್ಷ ಅಬ್ದುರ್ರಹಿಮಾನ್ ಬಾಷಾ ಉಳ್ಳಾಲ, ಎಂಎಸ್‌ಎಂ ಕೇರಳ ಪ್ರಧಾನ ಕಾರ್ಯದರ್ಶಿ ಸೈಫುದ್ದೀನ್ ಸ್ವಲಾಹಿ, ಎಸ್‌ಕೆಎಸ್‌ಎಂ ನಿಕಟಪೂರ್ವ ಅಧ್ಯಕ್ಷ ಯು.ಎನ್.ಅಬ್ದುಲ್ ರಝಾಕ್, ಮಾಜಿ ಅಧ್ಯಕ್ಷ ಅಹ್ಮದ್ ಅನ್ಸಾರ್, ಉದ್ಯಮಿ ರಿಯಾಝ್ ಬಾವ, ಜಿ.ಅಬ್ಬಾಸ್, ಸಿರಾಜ್ ತಲಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಸಮಾರೋಪ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅಹ್ಮದ್ ಅನಸ್, ಮಮ್ಮುಟ್ಟಿ ಮುಸ್ಲಿಯಾರ್, ಆದಿಲ್ ಅತೀಫ್ ಸ್ವಲಾಹಿ, ಉನೈಸ್ ಪಾಪಿನಶ್ಶೇರಿ, ಮುಹಮ್ಮದ್ ಸಾಕಿದ್ ಸಲೀಂ ಉಮ್ರಿ, ಮುಹಮ್ಮದ್ ಅಲಿ ಸಲಫಿ ಪ್ರವಚನ ನೀಡಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ಇಬಾತ್ ಕಿರಾಅತ್ ಪಠಿಸಿದರು. ಐಎಸ್‌ಎಂ ಕೇರಳ ಪ್ರಧಾನ ಕಾರ್ಯದರ್ಶಿ ಪಿ.ಕೆ. ಜಮ್‌ಶೀರ್ ಫಾರೂಕಿ ಸ್ವಾಗತಿಸಿದರು. ಆತೀಶ್ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ.ಮುಹಮ್ಮದ್ ವಂದಿಸಿದರು.

ಬಹುಮಾನ ವಿತರಣೆ

6ನೇ ಹಂತದ ‘ಕುರ್‌ಆನ್ ಕಲಿಯಿರಿ’ ಪರೀಕ್ಷೆಯ ವಿಜೇತರಿಗೆ ಮುಖ್ಯಅತಿಥಿ ಕೆಎನ್‌ಎಂ ಉಪಾಧ್ಯಕ್ಷ ಡಾ.ಹುಸೈನ್ ಮಡವೂರು ಬಹುಮಾನ ವಿತರಿಸಿದರು.

ನಸೀಮಾ ಪುತ್ತೂರು (ಪ್ರಥಮ), ಅಥಿಯಾ ಸನೂರಾ, ತಸ್ನಿಮಾ ಕೊಣಾಜೆ ಹಾಗೂ ರುಬಿನಾ ಕೆ. ಪುತ್ತೂರು ದ್ವಿತೀಯ ಬಹುಮಾನ ಪಡೆದರು. ತೃತೀಯ ಬಹುಮಾನಗಳಿಗೆ ಮರಿಯಂ ಬಾನು ಉಳ್ಳಾಲ, ಹಫೀಝಾ ಅಬ್ದುಲ್ ಖಾದರ್, ಹಸೀನಾ ಕೊಣಾಜೆ, ಯು.ಟಿ. ಫೌಝಿಯಾ ಬಾನು, ಫಾತಿಮಾ ಅಮ್ರಿನ್ ಕಣ್ಣೂರು, ಶಹೀರಾ ಕೆ.ಪಿ. ಅಲೆಕಳ, ಝಫ್ರೀನಾ ಕುಂಜತ್‌ಬೈಲ್, ಸಾಜಿದಾ, ಸಾಜಿದಾ ಹಫೀಝ್ ಫಳ್ನೀರ್, ಖದೀಜಾ ಅಶ್ಯಾಮ್ (ಉಳ್ಳಾಲ ಸೆಂಟರ್) ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News