ನಮ್ಮ ದೇಶದ, ಸಮಾಜದ ಒಳಿತಿಗಾಗಿ ನಿಮ್ಮ ಸೇವೆ ಸಲ್ಲಿಸಿ : ಶರೀಫ್ ಸಅದಿ

Update: 2019-08-25 15:37 GMT

ಕಾರ್ಕಳ : ಹಿದಾಯತುಲ್ ಇಸ್ಲಾಂ ಟ್ರಸ್ಟ್  ಬಂಗ್ಲೆಗುಡ್ಡೆ, ಕಾರ್ಕಳ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇವರ ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಕಾರ್ಕಳದ ಬಂಗ್ಲಗುಡ್ಡೆ ಸಲ್ಮಾನ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತ್ವೈಬಾ ಗಾರ್ಡನ್ ಬಂಗ್ಲಗುಡ್ಡೆ ಪ್ರಾಂಶುಪಾಲ ಶರೀಫ್ ಸಅದಿ ಕಿಲ್ಲೂರ್  ನೆರೆವೇರಿಸಿ ಮಾತನಾಡುತ್ತಾ, "ನಿಮ್ಮ ಸೇವೆ ‌ಕೇವಲ ಪ್ರಚಾರಕ್ಕೆ ಸಿಮಿತವಾಗದೇ ನಮ್ಮ ದೇಶ, ಸಮಾಜ, ಸಮುದಾಯ ಜಿಲ್ಲೆ ನಮ್ಮ‌ ಪರಿಸರದ‌ ಒಳಿತಾಗಿ ನಿಮ್ಮ ಸೇವೆ ನೀಡುವಂತಾಗ ಬೇಕು ಅಲ್ಲದೆ ನೀವು ನೀಡಿದ ಸೇವೆ ಮತ್ತೊಬ್ಬರಿಗೆ ಲಾಭದಾಯಕವಾಗುವಂತಿರ ಬೇಕು" ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ‌ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ "ರಕ್ತದಾನ ಮಾಡುವ ಮೂಲಕ ಒಬ್ಬ ಇನ್ನೊಬ್ಬರ ಪ್ರಾಣ ಉಳಿಸಬಹುದಾಗಿದೆ. ಎಲ್ಲಾ ಪೈಕಿ ರಕ್ತದಾನ ಶೇಷ್ಠವಾಗಿದೆ ಎಲ್ಲರೂ ರಕ್ತದಾನ‌ ಮಾಡಿ" ಎಂದು ಸಲಹೆ ನೀಡಿದರು.

ಮುಸ್ಲಿಂ ಜಮಾತ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ‌‌‌ ಅಶ್ಪಕ್ ಅಹಮ್ಮದ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆ ಯ ಕಾರ್ಯನಿರ್ವಾಹಕ ಅಶ್ರಫ್ ಅರಬಿ ಕಲ್ಲಡ್ಕ ಮಾತನಾಡಿದರು.

ರಕ್ತ ದಾನ ಶಿಬಿರದಲ್ಲಿ ಒಟ್ಟು 90 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಗಳಾಗಿ ಹಿದಾಯುತುಲ್ ಇಸ್ಲಾಂ ಟ್ರಸ್ಟ್  ಅಧ್ಯಕ್ಷ ಶೇಕ್ ಮುಹಮ್ಮದ್ ಫಾಝಿಲ್, ಕಾರ್ಯದರ್ಶಿ ಹುಸೈನ್ ಬಂಗ್ಲೆಗುಡ್ಡೆ, ಉದ್ಯಮಿ  ಅಬ್ದುಲ್ ಅಝೀಝ್, ಹಿದಾಯ ಅಲ್ ಜುಬೈಲ್ ನ ಪ್ರಧಾನ ‌ ಕಾರ್ಯದರ್ಶಿ ಸಲೀಂ ಉಡುಪಿ, ಕಾರ್ಕಳ ಪುರಸಭೆ ‌ಮಾಜಿ ಅಧ್ಯಕ್ಷ ಸುಭೀತ್ ಎನ್.ಆರ್, ಉದ್ಯಮಿ ರಜಬ್ ಎ ಕೆ, ವಕೀಲರಾದ ರಹ್ಮತ್, ಅಭಿಮತ ಚಾನೆಲ್ ನಿರ್ದೇಶಕ ಅಬೂಬಕ್ಕರ್ ಎ ಕೆ, V4 ವರದಿಗಾರಾದ ಖಲೀಲ್ ಅಹ್ಮದ್, ಪತ್ರಕರ್ತರಾದ  ಸಂಪತ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಹಿದಾಯತುಲ್ ಇಸ್ಲಾಂ ಟ್ರಸ್ಟ್ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಕಳ ಪುರಸಭೆಯ ಸ್ಥಾಯೀ ಸಮಿತಿಯ ಮಾಜಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News