223ನೆ ಸಂಗೊಳ್ಳಿ ರಾಯಣ್ಣನ ಜಯಂತ್ಯೋತ್ಸವ

Update: 2019-08-25 16:18 GMT

ಉಡುಪಿ, ಆ. 25: ಶ್ರೀಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘ ಉಡುಪಿ ಜಿಲ್ಲೆ ಇದರ ವತಿಯಿಂದ 223ನೆ ಸಂಗೊಳ್ಳಿ ರಾಯಣ್ಣನ ಜಯಂತ್ಯೋತ್ಸವವನ್ನು ರವಿವಾರ ಉಡುಪಿಯ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ಸಂಘದ ನಾಯಕ ಸುರೇಶ್ ಗೋಕಾಕ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಪಾಪಣ್ಣ ಬಿ.ಎನ್. ವಹಿಸಿದ್ದರು. ವಾಗ್ಮಿಗಳಾದ ಮೋಹನ್ ಮೇಟಿ ಹಾಗೂ ಕೃಷ್ಣ ಮೌರ್ಯ ಖಾನಪುರ ಉಪನ್ಯಾಸ ನೀಡಿದರು.

ಕರ್ನಾಟಕ ಪ್ರದೇಶ ಮಹಿಳಾ ಯುವ ಕುರುಬರ ಸಂಘದ ಅಧ್ಯಕ್ಷೆ ಶಿಲ್ಪಾ ಎಸ್.ಕುದರಗೊಂಡ, ಉದ್ಯಮಿ ಗುರುಪ್ರಸಾದ್ ಶರ್ಮ, ಉಪ್ಪೂರು ಗ್ರಾಪಂ ಸದಸ್ಯ ಫ್ರಾಂಕಿ ಡಿಸೋಜ, ಯೋಧ ಎನ್.ಕೃಷ್ಣ ಮುಖ್ಯ ಅತಿಥಿಗಳಾಗಿದ್ದರು.

ಉದ್ಯಮಿಗಳಾದ ನಿಲೇಶ್ ಕರಡಿ, ಜಗದೀಶ್ ಗೊಕಾಕ್, ಸಂಘದ ಚಿಕ್ಕೋಡಿ ಅಧ್ಯಕ್ಷ ಕಿರಣ್ ಗೂಡ್ಸೆ, ಕರ್ನಾಟಕ ಯುವ ಕುರುಬರ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಶ್ರೀ ಬಾಬಣ್ಣ, ರಾಜ್ಯ ಯುವ ಕುರುಬರ ಒಕ್ಕೂಟದ ರಂಗನಗೌಡ ಮಾಲಿ ಪಾಟೀಲ್ ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸವಿತಾ ನೋಟಗಾರ ವಂದಿಸಿದರು. ಉಪನ್ಯಾಸಕ ಎಸ್.ಜಿ.ಭಾಗವತ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೋರ್ಡ್ ಹೈಸ್ಕೂಲ್‌ನಿಂದ ಹೊರಟ ಮೆರವಣಿಗೆಯು ಕನಕದಾಸ ರಸ್ತೆ ಮಾರ್ಗವಾಗಿ ರಥಬೀದಿಯಲ್ಲಿರುವ ಕನಕದಾಸರ ಪ್ರತಿಮೆಯ ಎದುರು ಸಮಾಪ್ತಿಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News