ತುಂಬೆಯಲ್ಲಿ ತುಳುವೆರೆ ಗಮ್ಮತ್ ಕಾರ್ಯಕ್ರಮ

Update: 2019-08-25 16:30 GMT

ಬಂಟ್ವಾಳ, ಆ. 25: ಆಶೀರ್ವಾದ ಸೇವಾ ಸಂಘ ಮತ್ತು ಆಶೀರ್ವಾದ ಮಹಿಳಾ ಸೇವಾ ಸಂಘ ತುಂಬೆ ಇದರ ಜಂಟಿ ಆಶ್ರಯದಲ್ಲಿ ತುಳುವೆರೆ ಗಮ್ಮತ್ ಕಾರ್ಯಕ್ರಮ ತುಂಬೆಯ ಮುದಲ್ಮೆ ಎಂಬಲ್ಲಿ ರವಿವಾರ ನಡೆಯಿತು.

ರೋಟರಿ ಬಂಟ್ವಾಳ ಟೌನ್‍ನ ಕಾರ್ಯದರ್ಶಿ ಪಲ್ಲವಿ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಕ್ಕಳು, ಮಹಿಳೆಯರು, ಯುವಕರು ಹಾಗೂ ಹಿರಿಯರಿಗೆ ತುಳುನಾಡಿನ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ತೆಂಗಿನ ಗರಿ ಎಣೆಯುವುದು, ತೆಂಗಿನ ಕಾಯಿ ತುರಿಯುವುದು, ಪಾಡ್ದನ ಹೇಳುವುದು, ಮಡಿಕೆ ಹೊಡೆತ, ಓಟ, ಕಬಡ್ಡಿ, ಗೋಣಿ ಚೀಲ ಓಟ, ಲಗೋರಿ, ಜಿಬಿಲಿ, ಗೋಲಿಯಾಟಗಳು ನಡೆಯಿತು. ಸ್ಥಳೀಯರು ಮಕ್ಕಳು ಹಿರಿಯರೆನ್ನದೆ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ತಾಪಂಸದಸ್ಯ, ಆಶೀರ್ವಾದ ಯುವಕ ಸಂಘದ ಗೌರವಾದ್ಯಕ್ಷ ಗಣೇಶ್ ಸುವರ್ಣ ತುಂಬೆ ಮಾತನಾಡಿ, ಕಳೆದ ಏಳು ವರ್ಷಗಳಿಂದ ಆಟಿದ ಕೂಟ ನಡೆಸುತ್ತಿದ್ದೇವೆ. ಈ ಬಾರಿ, ಭಾರಿ ಮಳೆಯಿಂದಾಗಿ ಆಟಿಡೊಂಜಿ ದಿನ ನಡೆಸಲು ಸಾಧ್ಯವಾಗದೆ ಇದ್ದುದರಿಂದ ತುಳುವೆರೆ ಗಮ್ಮತ್ ಕಾರ್ಯಕ್ರಮ ನಡೆಸಿದ್ದೇವೆ ಎಂದರು.

ತುಂಬೆ ಗ್ರಾಪಂ ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ, ಸಂಘದ ಅಧ್ಯಕ್ಷ ವಿಶ್ವನಾಥ, ಕಾರ್ಯದರ್ಶಿ ಯಶವಂತ ಕೊಟ್ಟಿಂಜ, ಕೋಶಾಧಿಕಾರಿ ಕೇಶವ ಬೊಳ್ಳಾರಿ, ಮಹಿಳಾ ಸಂಘದ ಅಧ್ಯಕ್ಷೆ ಪಾರ್ವತಿ, ಕಾರ್ಯದರ್ಶಿ ಲಕ್ಷ್ಮೀ, ಕೋಶಾಧಿಕಾರಿ ಚಿತ್ರಾ ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News