ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ದಶಮಾನೋತ್ಸವ

Update: 2019-08-25 16:35 GMT

ಮಂಗಳೂರು, ಆ. 25:ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ದಶಮಾನೋತ್ಸವ ವರ್ಷದ ಅಂಗವಾಗಿ ಇಂದು ನಗರದ ಕೊಡಿಯಾಲ್‌ಬೈಲ್‌ನ ಟಿ.ವಿ. ರಮಣ್ ಪೈ ಕನ್ವೆನ್ಶನ್ ಹಾಲ್‌ನಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ವಿವಿಧ ಶೈಕ್ಷಣಿಕ ಶ್ರೇಣಿಗಳಲ್ಲಿ ಅಧ್ಯಯನ ಮಾಡುತ್ತಿರುವ 135 ಮಂದಿ ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗೆ ಒಟ್ಟು 3.5 ಕೋಟಿ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು.

ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ವೇತನ ಯೋಜನೆಯ ಮೂಲ ಪ್ರೇರಕ ಟಿ. ವಿ. ಮೋಹನದಾಸ ಪೈ ಈ ಸಂದರ್ಭದಲ್ಲಿ ದಿಕ್ಸೂಚಿ ಭಾಷಣ ಮಾಡಿ, ಕೊಂಕಣಿ ಸಮುದಾಯವು ಅತ್ಯಂತ ಚಿಕ್ಕದಾಗಿದ್ದರೂ ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ ಸಮುದಾಯನ್ನಾಗಿ ಮಾಡಲಾಗುವುದು ಎಂದರು.

ಕೊಂಕಣಿ ಭಾಷಿಗರಲ್ಲಿ ವೋಟಿಂಗ್ ಪವರ್ ಇಲ್ಲದಿರ ಬಹುದು; ಆದರೆ ಇಟೆಲೆಕ್ಚುವಲ್ ಪವರ್ ಇದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು 2030 ರ ವೇಳೆಗೆ ಜಾಗತಿಕ ಮಟ್ಟದಲ್ಲಿ 5000 ಮಂದಿ ಕೊಂಕಣಿ ಭಾಷಿಗರನ್ನು ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಇಂದಿನ ಯುವಕರು ಭವಿಷ್ಯದ ನಾಯಕರಾಗ ಬೇಕು. ಆರ್ಥಿಕ ಅಡಚಣೆಯಿಂದ ಯಾವನೇ ಕೊಂಕಣಿ ಭಾಷಿಗ ವಿದ್ಯಾರ್ಥಿ ಉನ್ನತ ಶಿಕ್ಷಣದಿಂದ ವಂಚಿತರಾಗ ಬಾರದು ಎಂಬ ಹಿನ್ನೆಲೆಯಲ್ಲಿ ವಿಶ್ವ ಕೊಂಕಣಿ ಕೇಂದ್ರವು ವಿದ್ಯಾರ್ಥಿ ವೇತನ ಯೋಜನೆಯನ್ನು 10 ವರ್ಷಗಳ ಹಿಂದೆ ಆರಂಭಿಸಿತ್ತು ಎಂದು ಅವರು ಹೇಳಿದರು.

ಮಕ್ಕಳಿಗೆ ಆವರ ಆಸಕ್ತಿಯ ವಿಷಯ ಆಯ್ಕೆ ಮಾಡಲು ಮುಕ್ತ ಅವಕಾಶ ಕಲ್ಪಿಸುವುದು ಅಗತ್ಯ. ಈ ದಿಶೆಯಲ್ಲಿ ಮಕ್ಕಳು 9 ನೇ ತರಗತಿಯಲ್ಲಿ ಇರುವಾಗಲೇ ಕೌನ್ಸೆಲಿಂಗ್ ನಡೆಸುವ ವ್ಯವಸ್ಥೆಯನ್ನು ಆರಂಭಿಸ ಬೇಕು ಎಂದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮೊದಲ ವಿದ್ಯಾರ್ಥಿ ವೇತನವನ್ನು ವಿತರಿಸಿದ ಮಣಿಪಾಲ್ ಅಕಾಡೆಮಿ ಆ್ ಹೈಯರ್ ಎಜ್ಯುಕೇಶನ್‌ನ ಟ್ರಸ್ಟಿ ವಸಂತಿ ರಾಮದಾಸ್ ಪೈ ಅವರು ಹೇಳಿದರು.

ಅತಿಥಿಯಾಗಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಕೊಂಕಣಿ ಸಮಾಜದ ಎಲ್ಲರೂ ಮುಖ್ಯ ವಾಹಿನಿಗೆ ಬರ ಬೇಕೆಂದು ವಿಶ್ವ ಕೊಂಕಣಿ ಕೇಂದ್ರವು ವಿದ್ಯಾರ್ಥಿ ವೇತನ ಯೋಜನೆ ಹಮ್ಮಿೊಂಡಿರುವುನು ಶ್ಲಾಘನೀಯ ಎಂದರು.

ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಕೊಂಕಣಿ ಭಾಷಿಗ ವಿದ್ಯಾರ್ಥಿಗಳಿಗೆ ಪ್ರವೇಶದ ಸಂದರ್ಭದಲ್ಲಿ ಬೇಕಾಗುವ ಎಲ್ಲಾ ಪ್ರಕ್ರಿಯೆಗಳ ಸೇವೆಯನ್ನು ಉಚಿತವಾಗಿ ಒದಗಿಸಲು ತಾನು ಸಿದ್ಧ ಎಂದು ಅತಿಥಿ ಝೂಮ್‌ಬ್ರಾಡ್ ಡಾಟ್.ಕಾಂ ಇದ ಸಿಇಒ ಅಭಿಶೇಕ್ ನಖಾಟೆ ಹೇಳಿದರು.
ಎಂಟರ್‌ಪ್ರೈಸ್ 5ಸಿ ಸಂಸ್ಥೆಯ ಸಿಇಒ ಜಗನ್ನಾಥ ಕಿಣಿ, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾ ಸಭಾದ ಅಧ್ಯಕ್ಷ ಕೆ.ಬಿ. ಖಾರ್ವಿ, ಕುಡುಬಿ ಸಮಾಜದ ಪ್ರತಿನಿಧಿ ನಾರಾಯಣ ನಾಯಕ್ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿ ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ಕಾರ್ಯದರ್ಶಿ ಪ್ರದೀಪ್ ಜಿ. ಪೈ ಪ್ರಸ್ತಾವನೆಗೈದರು. ವಿದ್ಯಾರ್ಥಿ ವೇತನ ಯೋಜನೆಯ ಹಳೆ ವಿದ್ಯಾರ್ಥಿಗಳು ಈ ಯೋಜನೆಗೆ ಸಹಕರಿಸುತ್ತಿದ್ದು, ಕಳೆದ ವರ್ಷ 18 ಲಕ್ಷ ರೂ. ಗಳನ್ನು ನೀಡಿದ್ದರು. ಈ ವರ್ಷ 35 ಲಕ್ಷ ರೂ. ಪಾವತಿಸಿದ್ದಾರೆ ಎಂದು ಪ್ರದೀಪ್ ಜಿ. ಪೈ ಹೇಳಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಿರೋಶ್ ಕುಮಾರಿ ಅವರು ಹಳೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ 35,38,612 ರೂ. ಗಳ ಚೆಕ್‌ನ್ನು ಟಿ.ವಿ. ಮೋಹನ್ ದಾಸ್ ಪೈ ಅವರಿಗೆ ಹಸ್ತಾಂತರಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಶಕುಂತಳಾ ಆರ್. ಕಿಣಿ ಉಪಸ್ಥಿತರಿದ್ದರು. ವಿನೀತ್ ಶಾನು ಬೋಗ್ ವಂದಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News