ಅಹ್ಮದ್ ಮಾಸ್ಟರ್ ಮಂಗಳೂರಿನಲ್ಲಿ ಫುಟ್ಭಾಲ್ ಕ್ರೀಡೆಗೆ ಪ್ರೇರಕ ಶಕ್ತಿ -ಅರುಣ್ ಶೆಟ್ಟಿ

Update: 2019-08-25 16:50 GMT

ಮಂಗಳೂರು, ಆ. 25: ಅಹ್ಮದ್ ಮಾಸ್ಟರ್ ಮಂಗಳೂರಿನಲ್ಲಿ ಫುಟ್ಬಾಲ್ ಕ್ರೀಡೆಗೆ ಪ್ರೇರಕ ಶಕ್ತಿಯಾಗಿದ್ದರೂ ಎಂದು ಕರ್ನಾಟಕ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಮಾಜಿ ಗೋಲ್ ಕೀಪರ್ ಅರುಣ್ ಶೆಟ್ಟಿ ತಿಳಿಸಿದ್ದಾರೆ.

ನಗರದ ಮಾಜಿ ಫುಟ್ಬಾಲ್ ಪ್ಲೇಯರ್ಸ್‌ ಎಸೊಸಿಯೇಸನ್ ಮಂಗಳೂರು ಇದರ ವತಿಯಿಂದ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ಹಮ್ಮಿಕೊಂಡ ಮಾಜಿ ಫುಟ್ಭಾಲ್ ಕ್ರೀಡಾಳುಗಳು, ಕ್ರೀಡಾ ಸಂಘಟಕ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸುಮಾರು 70 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಅಹಮ್ಮದ್ ಮಾಸ್ಟರ್ ಒಬ್ಬ ಉತ್ತಮ ಫುಟ್ಬಾಲ್ ಪ್ರೇಮಿ, ಜಂಟಲ್‌ಮ್ಯಾನ್ ಎಸ್.ಕೆ. ಅಮೀನ್ , ಅಬ್ದುಲ್ಲಾ ಕೋಯಾ ಸೇರಿದಂತೆ ಹಲವು ಮಂದಿ ನಗರದಲ್ಲಿ ಫುಟ್ಬಾಲ್ ಕ್ರೀಡೆಗೆ ಜೀವ ತುಂಬಿ ಯುವಜನರಲ್ಲಿ ಫುಟ್ಬಾಲ್ ಬಗ್ಗೆ ಆಸಕ್ತಿ ಹುಟ್ಟಿಸಿದವರು, ಹಲವು ಫುಟ್ಬಾಲ್ ಕ್ರೀಡಾಕೂಟವನ್ನು ಅವರು ಮಂಗಳೂರಿನಲ್ಲಿ ಸಂಘಟಿಸಿದ್ದರು ಎಂದು ಹೇಳಿದರು.

ಫುಟ್ಬಾಲ್ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದೆ: ನಾನು ಕೇಲವ ಫುಟ್ಬಾಲ್ ಆಟವೊಂದರಿಂದ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಲು ವಿಶೇಷ ಅರ್ಹತೆ ಪಡೆದು ಆಯ್ಕೆಯಾದೆ. ಬಳಿಕ ಅಲ್ಲಿ ಅಧಿಕಾರಿಯೂ ಆದೆ. ನಂತರ ದೇಶಕ್ಕಾಗಿ ಎರಡು ಭಾರಿ ಭಾರತೀಯ ವಾಯು ಸೇನೆಯ ಮಿಸ್ಸೆಲ್ ಅಧಿಕಾರಿಯಾಗಿ ಯುದ್ಧದಲ್ಲಿ ಪಾಲ್ಗೊಂಡೆ. ಇದಕ್ಕೆ ಮಂಗಳೂರಿನಲ್ಲಿ ನಾನು ಬಾಲ್ಯದಲ್ಲಿ ಆಡಿದ ಫುಟ್ಬಾಲ್ ಆಟ ಕಾರಣ ಎಂದು ಸನ್ಮಾನ ಸ್ವೀಕರಿಸಿದ ಮಾಜಿ ಫುಟ್ಬಾಲ್ ಆಟಗಾರ ಎಡ್ವಿನ್ ನೆಟ್ಟೊ ತಮ್ಮ ಆಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಫುಟ್ಬಾಲ್ ಎಸೋಸಿಯೇಶನ್‌ನ ಅಧ್ಯಕ್ಷ ಡಿ.ಎಂ.ಅಸ್ಲಾಂ ಕಳೆದ 23 ವರ್ಷದಲ್ಲಿ ಫುಟ್ಬಾಲ್ ಬೆಳವಣಿಗೆಯ ಬಗ್ಗೆ ತಿಳಿಸಿ ಪ್ರಸಕ್ತ 220 ತಂಡಗಳು ಇಂಡಿಪೆಂಡನ್ಸ್ ಕಫ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರ. ಆದರೆ ಉತ್ತಮ ಫುಟ್ಬಾಲ್ ಮೈದಾನ ಹಾಗೂ ಇತರ ಸೌಲಭ್ಯಗಳಿಗಾಗಿ ಎಲ್ಲರ ಪ್ರಯತ್ನ ಅಗತ್ಯವಿದೆ ಎಂದರು.

ಕೇರಳ ಪುಟ್ಭಾಲ್ ತಂಡದ ವ್ಯವಸ್ಥಾಪಕ ಪಿ.ಸಿ.ಆಸಿಫ್‌ ಸ್ವಾಗತಿಸಿ, ಮಂಗಳೂರಿನಲ್ಲಿ ಅಹಮ್ಮದ್ ಮಾಸ್ಟರ್ ಅವರ ಕೊಡುಗೆ ಹಾಗೂ ಮಂಗಳೂರಿನ ಮಾಜಿ ಫುಟ್ಬಾಲ್ ಆಟಗಾರರ ಕೊಡುಗೆಯನ್ನು ನೆನಪಿಸುವ ಮತ್ತು ಅವರನ್ನು ಗೌರವಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಮಾರಂಭದಲ್ಲಿ 43 ಹಿರಿಯ ಫುಟ್ಬಾಲ್ ಆಟಗಾರರನ್ನು ಸನ್ಮಾನಿಸಲಾಯಿತು. ಸಂಘಟಕರಾದ ಹುಸೈನ್ ಬೊಳಾರ, ಅನಿಲ್.ಪಿ.ವಿ ,ಉಮೇಶ್ ಉಚ್ಚಿಲ್ , ಎ.ಕೆ. ನಿಯಾಝ್, ಭಾಸ್ಕರ್, ಮುಸ್ತಾಫ್‌ ಬೊಳಾರ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ಫುಟ್ಬಾಲ್ ಕ್ರೀಡಾ ಪಟುಗಳ ಸನ್ಮಾನ

ಮಾಜಿ ಫುಟ್ಬಾಲ್ ಕ್ರೀಡಾಳುಗಳು, ಕ್ರೀಡಾ ಸಂಘಟಕ ಸನ್ಮಾನ ಕಾರ್ಯಕ್ರಮದಲ್ಲಿ 43 ಹಿರಿಯ ಮಾಜಿ ಫುಟ್ಬಾಲ್ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಭಾರತದ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಪ್ರತಿನಿಧಿಸಿದ ಹಸನ್ ಆಸಿಫ್, ಮಂಗಳೂರಿನ ಮಾಜಿ ಹಿರಿಯ ಫುಟ್ಬಾಲ್ ಆಟಗಾರರಾದ ಟಿ. ಹುಸೈನ್, ಅಬ್ದುಲ್ ರಶೀದ್, ಅಬ್ದುಲ್ ರವೂಫ್, ಹಸನ್ ಚೆಯ್ಯಬ್ಬ, ಅಬ್ದುಲಬ್ಬಾ , ಹಂಝ, ರಝಾಕ್ ಮಾಸ್ಟ್‌ರ್, ಮುಬಾರಕ್ ಆಹಮ್ಮದ್, ಅಹಮ್ಮದ್ ಬಾವಾ, ಅಬೂಬಕ್ಕರ್, ಲೋಕನಾಥ ಬೆಂಗ್ರೆ, ಹರಿಶ್ಚಂದ್ರ, ಯಶ್ಫಾಲ್, ವಿಜಯ ತಿಂಗಳಾಯ, ಲಕ್ಷ್ಮಣ ಪೂಜಾರಿ, ಚಂದ್ರ ಕುಮಾರ್, ರವಿ ಶೆಟ್ಟಿ, ಮೊಹಿಯುದ್ದೀನ್, ಉಮಾನಾಥ್, ಅರುಣ್ ಶೆಟ್ಟಿ, ಇಸಾ ಪಾಟೇಲ್, ಕೇಶವ ಕರ್ಕೆರಾ, ಪ್ರಭಾಕರ, ರವೂಫ್ ಕಚ್‌ಮನ್, ಬಿ.ಎಸ್. ಬಶೀರ್, ಜನಾರ್ದನ, ರಝಾಕ್, ಮೊಯ್ದಿನ್‌ ಹಸನ್, ಎಂ.ಮೂಸಾ, ಎಡ್ವಿನ್ ನಟ್ಟೊ, ಮೊಹಮ್ಮದ್ ಸಾಲಿ, ಡಿ.ಎಂ.ಅಸ್ಲಾಂ, ಬಿ.ಎಸ್. ಹುಸೈನ್, ಅನಿಲ್.ಪಿ.ವಿ, ಉಮೇಶ್ ಉಚ್ಚಿಲ್, ಎ.ಕೆ. ನಿಯಾಝ್, ಭಾಸ್ಕರ್, ಮುಸ್ತಾಫ್‌ ಬೊಳಾರ, ಪಿ.ಸಿ.ಆಸಿಫ್, ಮೊದಲಾದವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News