ಸಜಿಪ: ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ಮಾದರಿ ತರಗತಿ

Update: 2019-08-25 17:05 GMT

ವಿಟ್ಲ : ಸಜಿಪ ರೇಂಜ್ ಜಂ - ಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ಮಾದರಿ ತರಗತಿ (ಮಾಡೆಲ್ ಡಿಜಿಟಲ್ ಕ್ಲಾಸ್) ಕಾರ್ಯಕ್ರಮವು ಇತ್ತೀಚೆಗೆ ಸಜಿಪದ ಅಲ್ ಮದ್ರಸತುನ್ನೂರಿಯಾದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಪತ್ತಿಸ್ ಉಮರ್ ದಾರಿಮಿ ಸಾಲ್ಮರ ಮಾತನಾಡಿ ಸಜಿಪ ರೇಂಜ್ ನಲ್ಲಿ ನಡೆದ ಮದ್ರಸ ಮಟ್ಟದ ಮಾದರಿ ತರಗತಿಯ ಜಿಲ್ಲೆಯಲ್ಲೇ ಪ್ರಥಮ ಪ್ರಯೋಗವಾಗಿದೆ ಎಂದ ಅವರು ವಿದ್ಯಾರ್ಥಿಗಳನ್ನು ಅರಿತುಕೊಂಡು ಅವರ ಸಾಮರ್ಥ್ಯಕ್ಕನು ಗುಣವಾಗಿ ಬೋಧನೆ ನೀಡಿದರೆ ಆ ವಿದ್ಯಾರ್ಥಿಗಳಿಂದ ನಿರೀಕ್ಷಿತ ಫಲಿತಾಂಶ ಪಡೆಯಲು ಸಾದ್ಯ ಎಂದರು.

ಸಜಿಪ ರೇಂಜ್ ಅಧ್ಯಕ್ಷ ಫಳಲ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಮುದರ್ರಿಬ್ ಮುಹಮ್ಮದ್ ಮುಸ್ಲಿಯಾರ್ ಮಂಡೋಲೆ ಮುಖ್ಯ ಬಾಷಣಗೈದರು. ರಫೀಕ್ ಮುಸ್ಲಿಯಾರ್ ಕಡಂಬು ಮಾದರಿ ತರಗತಿ ನಡೆಸಿಕೊಟ್ಟರು.

ರೇಂಜ್ ಕೋಶಾಧಿಕಾರಿ ರಝಾಕ್ ಹಾಜಿ ಸಜಿಪ, ಆಸಿಫ್ ಕುನ್ನಿಲ್, ಮೋನಾಕ ಬೋಳಮೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೇಂಜ್ ಕಾರ್ಯದರ್ಶಿ ಶರೀಫ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News