ಭಟ್ಕಳ: ಮಾರುಕಟ್ಟೆಯಿಂದ 40 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶ

Update: 2019-08-25 17:34 GMT

ಭಟ್ಕಳ: ಇಲ್ಲಿನ ಪುರಸಭೆ ಅಧಿಕಾರಿಗಳು ರವಿವಾರ ಸಂತೆ ಮಾರುಕಟ್ಟೆಗೆ ದಾಳಿ ನಡೆಸಿ 40 ಕೆ.ಜಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ವಶಪಡಿಸಿಕೊಡಿದ್ದಾರೆ.

ಪ್ಲಾಸ್ಟಿಕ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಇಂತಹ ದಾಳಿಗಳು ಅನಿರೀಕ್ಷಿತವಲ್ಲ. ಈ ಕುರಿತಂತೆ ಮುಂಚಿತವಾಗಿ ವ್ಯಾಪಕ ಪ್ರಚಾರ ನೀಡಲಾಗಿದ್ದು ಆದರೂ ಕೂಡ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಲೇ ಇದೆ. ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದು, ಸಂಗ್ರಹಿಸುವುದು ಮತ್ತು ಸರಬರಾಜು ಮಾಡುವುದು ಪರಿಸರ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪುರಸಭೆಯ ಆರೋಗ್ಯಾಧಿಕಾರಿ ಸೋನಿಯಾ ಸೋಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಕುರಿತಂತೆ ಮುಂದೆಯೂ ಕೂಡ ದಾಳಿಗಳನ್ನು ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News