ಭಟ್ಕಳ: ಶಮ್ಸ್ ನೂರ್ ನರ್ಸಿಂಗ್ ಹೋಂ ನಲ್ಲಿ ರಕ್ತದಾನ ಶಿಬಿರ

Update: 2019-08-25 17:36 GMT

ಭಟ್ಕಳ: ಇಲ್ಲಿನ  ಶಮ್ಸ್ ನೂರ್ ನರ್ಸಿಂಗ್ ಹೋಂ ನಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿಯ ಸರ್ಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ರವಿವಾರ ನಡೆಯಿತು. ಈ ಶಿಬಿರದಲ್ಲಿ 44 ಯುನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಡಾ. ಶಮ್ಸ್ ನೂರ್, ಡಾ.ವೀನಾ, ಅಬ್ದುಸ್ಸಮಿ ಕೋಲಾ, ನಿಸಾರ್ ಆಹ್ಮದ್ ರುಕ್ನುದ್ದೀನ್, ನಝೀರ್ ಕಾಶಿಮಜಿ, ಸೈಯ್ಯದ್ ಇಮ್ರಾನ್ ಲಂಕಾ, ಸೈಯ್ಯದ್ ಖುತುಬ್ ಲಂಕಾ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News