ಭ್ರಷ್ಟಾಚಾರದ ಆರೋಪ: 22 ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಗೊಳಿಸಿದ ಕೇಂದ್ರ

Update: 2019-08-26 09:32 GMT

ಹೊಸದಿಲ್ಲಿ, ಆ.26: ಭ್ರಷ್ಟಾಚಾರದ ಆರೋಪದ ಮೇಲೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ 22 ಹಿರಿಯ ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ. ಈ ಹಿಂದೆ ಜೂನ್ ತಿಂಗಳಿನಲ್ಲಿ ಸರಕಾರ ಮಂಡಳಿಯ 12 ಮಂದಿ ಅಧಿಕಾರಿಗಳೂ ಸೇರಿದಂತೆ 27 ಉನ್ನತ ಶ್ರೇಣಿಯ ಐಆರ್ ಎಸ್ ಅಧಿಕಾರಿಗಳನ್ನು ಇದೇ ರೀತಿ ಭ್ರಷ್ಟಾಚಾರದ ಆರೋಪದ ಮೇಲೆ ಕಡ್ಡಾಯವಾಗಿ ನಿವೃತ್ತಿಗೊಳಿಸಿತ್ತು.

 ಕೆ ಸಿ ಮಂಡಲ್, ಎಂ ಎಸ್ ದಾಮೊರ್, ಆರ್ ಎಸ್ ಗೊಗಿಯ, ಕಿಶೋರ್ ಪಟೇಲ್, ಜೆ ಸಿ ಸೋಳಂಕಿ, ಎಸ್ ಕೆ ಮಂಡಲ್, ಗೋವಿಂದ್ ರಾಮ್ ಮಾಲವಿಯ, ಎ ಯು ಛಪ್ಪರ್ಗರೆ, ಎಸ್ ಅಶೋಕ್ ರಾಜ್, ದೀಪಕ್ ಗಣೇಯನ್, ಪ್ರಮೋದ್ ಕುಮಾರ್, ಮುಕೇಶ್ ಜೈನ್, ನವನೀತ್ ಗೋಯಲ್, ಅಚಿಂತ್ಯ ಕುಮಾರ್ ಪ್ರಮಾಣಿಕ್, ವಿ ಕೆ ಸಿಂಗ್, ಡಿ ಆರ್ ಚತುರ್ವೇದಿ, ಡಿ ಅಶೋಕ್, ಲೀಲಾ ಮೋಹನ್ ಸಿಂಗ್ ಹಾಗೂ ವಿ ಪಿ ಸಿಂಗ್ ಕಡ್ಡಾಯವಾಗಿ ನಿವೃತ್ತರಾಗುವಂತೆ ಮಾಡಲಾದ ಅಧಿಕಾರಿಗಳು.

ಈ ಅಧಿಕಾರಿಗಳು ಜಿಎಸ್‍ಟಿಗೆ ಸಂಬಂಧಿಸಿದ ಕೆಲಸ ಕಾರ್ಯ ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News