ಡಾಲರ್ ಎದುರು 56 ಪೈಸೆಯಷ್ಟು ಕುಸಿದ ರೂಪಾಯಿ ಮೌಲ್ಯ

Update: 2019-08-26 15:31 GMT

ಹೊಸದಿಲ್ಲಿ, ಆ.26: ಅಮೆರಿಕನ್ ಡಾಲರ್ ಎದುರು ರೂಪಾಯಿ ವೌಲ್ಯ ಸೋಮವಾರ 59 ಪೈಸೆಯಷ್ಟು ಕುಸಿದಿದ್ದು ಈ ವರ್ಷದಲ್ಲೇ ಇದು ರೂಪಾಯಿಯ ಅತ್ಯಂತ ಕನಿಷ್ಟ ಮೌಲ್ಯವಾಗಿದೆ . ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 72.25 ರೂ.ಗೆ ತಲುಪಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಕರೆನ್ಸಿಯ ಮೌಲ್ಯ ಜಾಗತಿಕವಾಗಿ ಕುಸಿದಿದ್ದು ಚೀನಾದ ಯುವಾನ್ ಕಳೆದ 11 ವರ್ಷದಲ್ಲೇ ಅತ್ಯಂತ ಕನಿಷ್ಟ ಮೌಲ್ಯವನ್ನು ದಾಖಲಿಸಿದ್ದು ಈ ಕುಸಿತ ಭಾರತದ ರೂಪಾಯಿ ದರ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಮಧ್ಯೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ದರ ಇಳಿಕೆಯಾದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯುವುದು ತಪ್ಪಿದೆ. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ 71.66 ರೂ. ಆಗಿತ್ತು. ಚೀನಾ-ಅಮೆರಿಕ ಮಧ್ಯೆ ಮತ್ತೊಂದು ಸುತ್ತಿನ ವ್ಯಾಪಾರ ಸಂಘರ್ಷ ಆರಂಭವಾಗಿರುವುದು ಇದರ ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲಾಗಿದೆ.

ಚೀನಾದ ಸರಕುಗಳ ಮೇಲೆ 550 ಬಿಲಿಯನ್ ಡಾಲರ್ ಮೊತ್ತದ ಹೆಚ್ಚುವರಿ ತೆರಿಗೆಯನ್ನು ಶುಕ್ರವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಇದಕ್ಕೆ ಪ್ರತೀಕಾರ ಕ್ರಮವಾಗಿ ಚೀನಾವು ಅಮೆರಿಕದ ಸರಕುಗಳ ಮೇಲೆ 75 ಡಾಲರ್ ಹೆಚ್ಚುವರಿ ತೆರಿಗೆ ವಿಧಿಸುವುದಾಗಿ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News