ಪೊಲೀಸ್ ಅಧಿಕಾರಿ ಕೊಲೆ ಪ್ರಕರಣದ ಆರೋಪಿಗಳಿಗೆ ಸ್ವಾಗತ: ‘ದೊಡ್ಡ ವಿಚಾರವೇನಲ್ಲ’ ಎಂದ ಉ. ಪ್ರದೇಶ ಸರಕಾರ!

Update: 2019-08-26 11:39 GMT

ಲಕ್ನೋ, ಆ.26: ಕಳೆದ ವರ್ಷದ  ಡಿಸೆಂಬರ್ ನಲ್ಲಿ ಬುಲಂದ್ ಶಹರ್ ನಲ್ಲಿ ಗೋಹತ್ಯೆ ವದಂತಿಯ ನಂತರ ಸಂಬಂಧಿಸಿದ ಗಲಭೆ ಮತ್ತು ಪೊಲೀಸ್ ಅಧಿಕಾರಿಯನ್ನು ಗುಂಪೊಂದು ಗುಂಡಿಕ್ಕಿ ಸಾಯಿಸಿದ ಘಟನೆಯ ಆರೋಪಿಗಳು ಕಳೆದ ವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಅವರನ್ನು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಸ್ವಾಗತಿಸಿದ ಘಟನೆ ಭಾರೀ ವಿವಾದ ಸೃಷ್ಟಿಸಿದೆ. ಆದರೆ ಈ ಘಟನೆ ‘ದೊಡ್ಡ ವಿಷಯವೇನಲ್ಲ’ ಎಂದು ಉತ್ತರ ಪ್ರದೇಶ ಸರಕಾರ ಹೇಳಿದೆ.

ಪ್ರಕರಣದ ಒಟ್ಟು 33 ಆರೋಪಿಗಳ ಪೈಕಿ ಏಳು ಮಂದಿ ಕಳೆದ ವಾರ ಬಿಡುಗಡೆಗೊಂಡಾಗ ಅವರಿಗೆ ದೊರೆತ ಭರ್ಜರಿ ಸ್ವಾಗತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವಲ್ಲದೆ ಸಾಕಷ್ಟು ಆಕ್ರೋಶ ಕೂಡ ಮೂಡಿಸಿದ್ದವು.

“ಜೈಲಿನಿಂದ ಬಿಡುಗಡೆಗೊಂಡವರ ಬೆಂಬಲಿಗರು ಅವರನ್ನು  ಸ್ವಾಗತಿಸಿದರೆ, ಸರಕಾರಕ್ಕೂ ಬಿಜೆಪಿಗೂ ಸಂಬಂಧಪಡದ ವಿಚಾರ ಅದಾಗಿದೆ. ವಿಪಕ್ಷಗಳು ಸಣ್ಣ ವಿಚಾರಗಳನ್ನು ಉತ್ಪ್ರೇಕ್ಷಿಸಬಾರದು'' ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೆ ಪಿ ಮೌರ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News