×
Ad

ಚಿದಂಬರಂ ಮನವಿ ತಳ್ಳಿ ಹಾಕಿದ ನ್ಯಾಯಾಲಯ

Update: 2019-08-26 21:33 IST

ಹೊಸದಿಲ್ಲಿ,ಆ.26: ಐಎನ್‌ಎಕ್ಸ್ ಮಾಧ್ಯಮ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸಲ್ಲಿಸಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ತಳ್ಳಿಹಾಕಿದೆ.

ಸಿಬಿಐ ಈಗಾಗಲೇ ಚಿದಂಬರಂ ಅವರನ್ನು ಬಂಧಿಸಿರುವ ಕಾರಣ ಅವರು ಈ ಪ್ರಕರಣದಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಮನವಿ ನಿಷ್ಪ್ರಯೋಜಕವಾಗುತ್ತದೆ ಎಂದು ಶ್ರೇಷ್ಟ ನ್ಯಾಯಾಲಯ ತಿಳಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಕಾನೂನು ಪ್ರಕಾರ ಪರಿಹಾರ ಪಡೆಯಲು ಅವರು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.

ಇದೇ ವೇಳೆ ಐಎನ್‌ಎಕ್ಸ್ ಮಾಧ್ಯಮ ಹಣವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ದೂರಿನಲ್ಲಿ ಮಾಜಿ ಕೇಂದ್ರ ವಿತ್ತ ಸಚಿವರಿಗೆ ನೀಡಲಾಗಿರುವ ಬಂಧನದ ವಿರುದ್ಧದ ಮಧ್ಯಂತರ ರಕ್ಷಣೆಯನ್ನು ನ್ಯಾಯಾಧೀಶರಾದ ಆರ್. ಭಾನುಮತಿ ಮತ್ತು ಎ.ಎಸ್ ಬೋಪಣ್ಣ ಅವರ ಪೀಠ ಮಂಗಳವಾರದವರೆಗೆ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News