×
Ad

ಮೋದಿಯ ಇಂಗ್ಲಿಷ್ ಬಗ್ಗೆ ಟ್ರಂಪ್ ಹೇಳಿದ್ದು ಹೀಗೆ…

Update: 2019-08-26 21:47 IST

ಪ್ಯಾರಿಸ್, ಆ.26: ಭಾರತದ ಪ್ರಧಾನಿ ನರೇಂದ್ರ ಮೋದಿ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಆದರೆ ಅವರಿಗೆ ಇಂಗ್ಲಿಷ್ ಮಾತನಾಡಲು ಇಷ್ಟವಿಲ್ಲ ಅಷ್ಟೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜಿ-ಎ ಶೃಂಗಸಭೆಯ ನೇಪಥ್ಯದಲ್ಲಿ ಉಭಯ ನಾಯಕರ ಮಧ್ಯೆ ನಡೆದ ಮಾತುಕತೆಯ ಸಂದರ್ಭ ಟ್ರಂಪ್ ಹೀಗೆ ತಮಾಷೆಯಾಗಿ ಹೇಳಿದರು. ಮಾತುಕತೆ ಆರಂಭಕ್ಕೂ ಮುನ್ನ ಉಭಯ ನಾಯಕರು ಪರಸ್ಪರ ಹಸ್ತಲಾಘವ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಆಗ ಮಾಧ್ಯಮದವರ ಪ್ರಶ್ನೆಗೆ ಮೋದಿ ಹಿಂದಿಯಲ್ಲಿ ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, “ನಿಜವಾಗಿಯೂ ಮೋದಿ ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲರು. ಆದರೆ ಅವರಿಗೆ ಮಾತನಾಡಲು ಇಷ್ಟವಿಲ್ಲ ಅಷ್ಟೇ” ಎಂದಾಗ ಅಲ್ಲಿ ನಗೆಯ ಅಲೆ ಹಬ್ಬಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News