ಮಮತಾಮಯಿ ಮದರ್ ಥೆರೆಸಾ ಬಗ್ಗೆ ಕುತೂಹಲಕಾರಿ ಮಾಹಿತಿಗಳಿವು…

Update: 2019-08-26 17:37 GMT

ನೋಬೆಲ್ ಪಾರಿತೋಷಕ ಪುರಸ್ಕೃತೆ, ಮಿಷನರೀಸ್ ಆಫ್ ಚಾರಿಟಿ ಸಂಸ್ಥಾಪಕಿ ಮದರ್ ತೆರೆಸಾ ಅವರ ಮಾನವೀಯ ಸೇವೆಗಳು ಎಲ್ಲರಿಗೂ ಮಾದರಿ. ಈ ಮಹಾ ಮಾನವತಾವಾದಿಯ ಬಗ್ಗೆ ಕೆಲವೊಂದು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

►ಮದರ್ ಥೆರೆಸಾ ಅವರ ಮೂಲ ಹೆಸರು ಅಂಜೀಝ್ ಗೊನ್‍ ಕ್ಸೆ ಬೊಜಕ್ಸ್‍ಹಿಯು. ಅಲ್ಬೇನಿಯನ್ ಭಾಷೆಯಲ್ಲಿ ಅಂಜೀಝ್ ಎಂದರೆ ಸಣ್ಣ ಹೂವು ಎಂದರ್ಥ.

► 1928ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಮನೆ ತೊರೆದ ಅವರು ತಮ್ಮ ಬದುಕನ್ನು ಸಮಾಜ ಸೇವೆಗೆ ಮುಡಿಪಾಗಿಸಿದರು. ಐರ್ ಲ್ಯಾಂಡ್ ನ ರಥ್‍ ಫರ್ನ್ ಹ್ಯಾನ್ ಎಂಬಲ್ಲಿನ ಲೊರೆಟೊ ಅಬ್ಬೆಯ ಸಿಸ್ಟರ್ಸ್ ಆಫ್ ಲೊರೆಟೊ ಸೇರಿದ ಮದರ್ ತೆರೆಸಾ ಮಿಷನರಿ ಆಗುವ ಉದ್ದೇಶದಿಂದ ಇಂಗ್ಲಿಷ್ ಕಲಿತರು. ಮನೆ ತೊರೆದ ನಂತರ ಆಕೆ ಮತ್ತೆ ತಮ್ಮ ತಾಯಿಯನ್ನು ಭೇಟಿಯಾಗಿಲ್ಲ.

► ಬಂಗಾಳಿ ಭಾಷೆ ಕಲಿತು ತಮ್ಮ ಕಾನ್ವೆಂಟ್ ಸಮೀಪದ ಸೈಂಟ್ ಥೆರೆಸಾ ಸ್ಕೂಲಿನಲ್ಲಿ ಅವರು ಶಿಕ್ಷಣ ಆರಂಭಿಸಿದ್ದರು. 

► ಮದರ್ ಥೆರೆಸಾ ಅವರಿಗೆ 100ಕ್ಕೂ ಹೆಚ್ಚು ಪ್ರಶಸ್ತಿಗಳು ಹಾಗೂ ಬಿರುದುಗಳು ದೊರಕಿವೆ.

► 1948ರಿಂದ ತಮ್ಮ ಮಿಷನರಿ ಕಾರ್ಯ ಆರಂಭಿಸಿದರಲ್ಲದೆ ನಂತರ ನೀಲಿ ಅಂಚಿನ ಬಿಳಿ ಸೀರೆ ಉಡಲು ಆರಂಭಿಸಿದರು.

► ಮದರ್ ತೆರೆಸಾ ಹುಟ್ಟಿದ ಒಂದು ದಿನದ ನಂತರ ಅವರಿಗೆ ನಾಮಕರಣ ಮಾಡಿದ್ದರಿಂದ ಆಗಸ್ಟ್ 27 ತಮ್ಮ ನಿಜವಾದ ಜನ್ಮದಿನವೆಂದು ಅವರು ಪರಿಗಣಿಸಿದ್ದರು.

► 1950ರಲ್ಲಿ ಅವರು ಮಿಷನರೀಸ್ ಆಫ್ ಚಾರಿಟಿ ಸ್ಥಾಪಿಸಿದರು.

► ಕೊಲ್ಕತ್ತಾದಲ್ಲ ಬಡ ಮಕ್ಕಳಿಗೆ ಕೆಸರಿನಲ್ಲಿ ಕಬ್ಬಿಣದ ಕಡ್ಡಿಗಳಿಂದ ಬರೆದು ಮಕ್ಕಳಿಗೆ ಕಲಿಸುತ್ತಿದ್ದರು.

► 1962ರಲ್ಲಿ ರಾಮನ್ ಮ್ಯಾಗ್ಸೆಸೆ ಶಾಂತಿ ಪ್ರಶಸ್ತಿ ಹಾಗೂ 1979ರ ನೋಬೆಲ್ ಶಾಂತಿ ಪುರಸ್ಕಾರ

►ಮದರ್ ಥೆರೆಸಾ ಅವರು ಇಂಗ್ಲಿಷ್, ಹಿಂದಿ, ಬಂಗಾಳಿ, ಅಲ್ಬೇನಿಯನ್ ಹಾಗೂ ಸರ್ಬಿಯನ್ ಭಾಷೆಯಲ್ಲಿ ಪರಿಣತರಾಗಿದ್ದರು.

► ಅವರು ಭಾರತ ಪೌರತ್ವವನ್ನು ಪಡೆದರು. ಪಾಟ್ನಾದ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ  ಮೂಲಭೂತ ವೈದ್ಯಕೀಯ ತರಬೇತಿಯನ್ನು ಹಲವು ತಿಂಗಳ ಕಾಲ ಪಡೆದು ನಂತರ ಕೊಳೆಗೇರಿಗಳಿಗೆ ಭೇಟಿ ನೀಡಿದರು.

► ಮದರ್ ಥೆರೆಸಾರನ್ನು ವ್ಯಾಟಿಕನ್ ಸಿಟಿಯ ಸೈಂಟ್ ಪೀಟರ್ಸ್ ಸ್ಕ್ವೇರ್ ನಲ್ಲಿ ಸೆಪ್ಟೆಂಬರ್ 4, 2016ರಂದು ಸಂತ ಪದವಿಗೇರಿಸಲಾಯಿತು.

► ಮದರ್ ತೆರೆಸಾ ಹಲವಾರು ಕಾಯಿಲೆಗಳಿಗೆ ತುತ್ತಾಗಿದ್ದರು. ಅವರಿಗೆ ನ್ಯುಮೋನಿಯಾ, ಮಲೇರಿಯಾ ಹಾಗೂ ಎರಡು ಬಾರಿ ಹೃದಯಾಘಾತವಾಗಿತ್ತು. ಒಮ್ಮೆ ಅವರ ಕೊರಳಿನ ಎಲುಬು ಕೂಡ ಮುರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News