ಉಳ್ಳಾಲ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾಟ

Update: 2019-08-27 12:42 GMT

ದೇರಳಕಟ್ಟೆ: ದ.ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದಕ್ಷಿಣ ವಲಯ ಮತ್ತು ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರಬೋಸ್ ಸರಕಾರಿ‌ ಪ್ರೌಢಶಾಲೆಯ ಸಂಯುಕ್ತ ಅಶ್ರಯದಲ್ಲಿ ಉಳ್ಳಾಲ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾಟ  ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರಬೋಸ್ ಶಾಲಾ ವಠಾರದಲ್ಲಿ ನಡೆಯಿತು.

ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಬಿ.ಎಂ ಸತ್ತಾರ್ ಕಾರ್ಯಕ್ರಮ‌ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಜೊತೆ ಪಠ್ಯೆತರ ಚಟುವಟಿಯಲ್ಲಿ ಭಾಗವಹಿಸಬೇಕು. ಮಸ್ತಕ ಬೆಳೆಯುದರ ಜೊತೆ ದೈಹಿಕವಾಗಿ ಬೆಳವಣೆಗೆಹೊಂದಬೇಕಾಗಿದೆ. ಪಂದ್ಯಾಟದಲ್ಲಿ‌ ಸೊಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು‌ ಮುಖ್ಯವಾಗಿದೆ ಎಂದು ಹೇಳಿದರು.

ಬೆಳ್ಮ ಗ್ರಾ.ಪಂ ಆಧ್ಯಕ್ಷೆ ವಿಜಯ ಕೃಷ್ಣ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ನಿವೃತ್ತ ತಹಶೀಲ್ದಾರ್  ನಾರಾಯಣ ಶೆಟ್ಟಿ, ಬೆಳ್ಮ ಗ್ರಾ.ಪಂ ಸದಸ್ಯ ಕಬೀರ್ ಡಿ,  ಪ್ರೌಢ ಶಾಲೆ ಅಭಿವೃದ್ಧಿ ಸಮಿತಿ ಆಧ್ಯಕ್ಷ ಇಸ್ಮಾಯಿಲ್ ಪಿ.ಎಚ್, ಪ್ರಾಥಮಿಕ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಅಬ್ಬೂ, ದೈಹಿಕ‌ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಹಾಬುದ್ದೀನ್.ಡಿ, ಉದ್ಯಮಿ ಕೆ.ಎಂ ಉಪಸ್ಥಿತರಿದರು.

ಪ್ರೌಢ ಶಾಲಾ ಮುಖ್ಯೋಪಾಧ್ಯಯಿನಿ ಚಂಚಲಾಕ್ಷಿ ಸ್ವಾಗತಿದರು. ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News