ಭಾರತದ ಜನರಿಕ್ ಔಷಧಗಳಿಗೆ ಚೀನಾ ಅವಕಾಶ

Update: 2019-08-27 16:18 GMT

ಬೀಜಿಂಗ್, ಆ. 27: ಭಾರತ ಮತ್ತು ಇತರ ದೇಶಗಳಲ್ಲಿ ಅಂಗೀಕಾರಗೊಂಡಿರುವ ಜನರಿಕ್ ಔಷಧಿಗಳನ್ನು ಈವರೆಗೆ ‘ನಕಲಿ ಔಷಧ’ ಎಂದು ಹೇಳುತ್ತಿದ್ದ ಚೀನಾ, ಈಗ ಅವುಗಳಿಗೆ ಅನುಮತಿ ನೀಡಿದೆ. ಈ ಔಷಧಗಳನ್ನು ಚೀನಾದ ರೋಗಿಗಳು ಡಿಸೆಂಬರ್ 1ರಿಂದ ಸಣ್ಣ ಪ್ರಮಾಣದಲ್ಲಿ ಬಳಸಬಹುದಾಗಿದೆ ಎಂದು ದೇಶದ ಪರಿಷ್ಕೃತ ಔಷಧ ನಿಯಂತ್ರಣ ಕಾನೂನು ಹೇಳಿದೆ.

ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ಚೀನಾದ ರೋಗಿಗಳಿಗೆ ಇದು ವರದಾನವಾಗಿದೆ. ಇನ್ನು ರೋಗಗಳು, ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್‌ನಂಥ ರೋಗಗಳ ಚಿಕಿತ್ಸೆಗೆ ಭಾರತದ ಅಗ್ಗದ ಜನರಿಕ್ ಔಷಧಗಳನ್ನು ಅವರು ಬಳಸಬಹುದಾಗಿದೆ.

ಆದರೆ, ಈ ಔಷಧಗಳನ್ನು ರೋಗಿಗಳು ಹೇಗೆ ಪಡೆಯಬಹುದು ಎನ್ನುವುದನ್ನು ಅಧಿಕೃತ ಘೋಷಣೆ ಹೇಳಿಲ್ಲ. ಚೀನಾದ ಔಷಧಿ ಅಂಗಡಿಗಳಲ್ಲಿ ಈ ಔಷಧಗಳು ಸಿಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News